ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮಾ.30: ಪಾನ್ಕಾರ್ಡ್ ಮತ್ತು ಆಧಾರ್ಕಾರ್ಡ್ ಜೋಡಣಗೆ ಒಂದು ಸಾವಿರ ರೂ. ದಂಡ ಮೊತ್ತ ವಿಧಿಸುತ್ತಿರುವುದನ್ನು ಇಲ್ಲಿನ ಸಮಾನ ಮನಸ್ಕರ ವೇದಿಕೆ ತೀವ್ರವಾಗಿ ವಿರೋಧಿಸಿದೆ.
ವೇಣುಗೋಪಾಲ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ಪಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದಕ್ಕೆ ಒಂದು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಇದನ್ನು ನಾವು ಯಾವ ರೀತಿ ಕಟ್ಟಬೇಕು ಒಂದು ಪಾನ್ಕಾರ್ಡ್ ಮಾಡಿಸಬೇಕಾದರೆ 250 ರೂಪಾಯಿ ಖರ್ಚು ಆಗುತ್ತದೆ. ಆದರೆ ಅದನ್ನು ಆಧಾರ್ ಕಾರ್ಡ್ ಜೊತೆ ಜೋಡಿಸುವುದಕ್ಕೆ ಸಾವಿರ ರೂ ದಂಡ ಪಾವತಿಸಬೇಕು ಎಂದರೆ ಬಡವರು ಎಲ್ಲಿಂದ ಕಟ್ಟಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಉಚಿತವಾಗಿ ಜೋಡಣೆ ಮಾಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಮಗೆ ಆಧಾರ್ಕಾರ್ಡ್ ಬೇಡ, ಪಾನ್ಕಾರ್ಡ್ ಸಹ ಬೇಡ ಎಂದು ಸರ್ಕಾರದ ವಿರುದ್ಧ ಆರೋಪ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಾಂಜನೇಯ, ಸುನಿಲ್, ಶ್ರೀಕಾಂತ್ (ಅಪ್ಪು ) ನಾರಾಯಣಸ್ವಾಮಿ, ಸೋಮು, ವೆಂಕಟೇಶ್, ಅನಂತರಾಮಯ್ಯ ಇನ್ನು ಮುಂತಾದವರು ಹಾಜರಿದ್ದರು.