ಚುನಾವಣೆ ಆಯೋಗದ ಆದೇಶ ಗಾಳಿಗೆ ತೂರಿ, ಟೂರ್ನಮೆಂಟ್
ಫೋಟೊ30ಜೇವರ್ಗಿ : ಜೇವರ್ಗಿ ತಾಲೂಕ ಕ್ರೀಡಾಂಗಣದಲ್ಲಿ ನೀತಿ ಸಹಿತೆ ಜಾರಿಯಲಿದ್ದರು ಟೂರ್ನಮೆಂಟ್ ನಡೆಸಲಾಯಿತು.
ಜೇವರ್ಗಿ 30 : 29 ರಂದು ರಾಜ್ಯ ಸರ್ಕಾರ ಚುನಾವಣೆ ಆಯೋಗ ನೀತಿ ಸಹಿತ ಜಾರಿಗೆ ತಂದರು ಆದೇಶವನ್ನು ಗಾಳಿಗೆ ತೂರಿ ತಾಲೂಕ ಕ್ರೀಡಾಂಗಣದಲ್ಲಿ ಪಕ್ಷ ಬಿಂಬಸುವ ಬ್ಯಾನರ್ ಮತ್ತು ಫ್ಲಾಕ್ಸ್ ಗಳು ರಾಜ ರಾರಾಜಿಸುತ್ತಿದ್ದವು. ಮೇಲ್ನೋಟಕ್ಕೆ ಆದೇಶ ಗಾಳಿಗೆ ತೂರಿ ಟೂರ್ನಮೆಂಟ್ ನಡೆಸಲಾಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದರು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಎ ಬಿ ಫೌಂಡೇಶನ್ ಅಡಿಯಲ್ಲಿ ರದ್ದೇವಾಡಗಿ ಕಪ್ 2023 ಸುರೇಶ ಪಾಟೀಲ್ ನೇದಲಗಿ ಸೇರಿದಂತೆ ಇನ್ನಿಬರು ಟುರ್ನಾಮೇಂಟ್ ನಡೆಸಿಕೊಡುತ್ತಿದ್ದರು.
ಚುನಾವಣೆ ಆಯೋಗದ ಸುಚನೆಯಂತೆ ಯಾವುದೇ ಪಕ್ಷದ ಸದಸ್ಯರ ಫೋಟೋ ಮತ್ತು ಫ್ಲ್ಯಾಕ್ಸ್ ಬ್ಯಾನರ್ ಗಳು ಹಾಕುವಂತಿಲ್ಲ. ಪಟ್ಟಣದಲ್ಲಿ ಪುರಸಭೆಯವರು ಹಲವು ಬ್ಯಾನರ್ ಮತ್ತು ಪೋಷ್ಟರ್ ಗಳನ್ನ ತೆಗೆದಿದ್ದಾರೆ. ಚುನಾವಣೆ ಮುಗಿಯುವವರೆಗೆ ಕೂಡ ಯಾವುದೆ ರೀತಿಯ ವ್ಯಕ್ತಿಗತವಾಗಿ ಹಾಗೂ ಪಕ್ಷಗತವಾಗಿ ಬ್ಯಾನರ್ಗಳನ್ನ ಬಳಸಬಾರದು ಮತ್ತು ಹಾಕಬಾರದು ಎಂದು ಆದೇಶವಿದ್ದರೂ ಕೂಡ ಆದೇಶ ಗಾಳಿಗೆ ತೂರಿ ಆಯೋಜಕರು ಟೂರ್ನಮೆಂಟ್ ನಡೆಸಿದ್ದಾರೆ.
ಗುರುವಾರ ಮದ್ಯಾಹ್ನ 12 ರ ನಂತರ ಪುರಸಭೆಯವರು ಎಚ್ಚೆತ್ತುಕೊಂಡು ಬ್ಯಾನರಗಳನ್ನ ತೆಗೆಯಲು ಮುಂದಾದರು. ಕ್ರೀಡಾಂಗಣದ ವ್ಯವಸ್ಥಾಪಕರು ಸೂಚನೆಯನ್ನು ಹಚ್ಚಿದರು ಕೂಡ ಅದನ್ನ ಲೇಕ್ಕಿಸದೆ ಕ್ರೀಡಾಂಗಣದಲ್ಲಿ ಕ್ರೀಕೆಟ್ ಆಟವಾಡಿಸಿದ್ದು ಚುನಾವಣೆ ಆಯೋಗದ ನೀತಿಯನ್ನು ಕಡೆಗಣಿಸಿದ್ದಾರೆ. ಆಯೋಗದ ಈ ಸುಚನೆಗೆ ಸೆಡ್ಡುಹೊಡೆದಂತೆ ಆಟವಾಡಿಸಿ ತಮ್ಮ ವರ್ಚಸನ್ನು ಆಯೋಜಕರು ತೋರಿಸಿದ್ದು ಮೇಲ್ನೋಟಕ್ಕೆ ಕಾಣಿಸುತ್ತದೆ. ನಮ್ಮ ಮೇಲೆ ಏನೇ ಕ್ರಮ ಕೈಗೊಂಡರು ನಾವು ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂಬ ಉದ್ದೇಶದಿಂದ ಕ್ರೀಡೆಯನ್ನು ಆಡಿಸಿದ್ದಾರೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಅದು ಎನೆ ಆಗಲಿ ಕೂಡಲೇ ಚುನಾವಣೆ ಆಯೋಗದ ಅಧಿಕಾರಿಗಳು ಟೂರ್ನಮೆಂಟ್ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣೆ ಆಯೋಗದ ಆದೇಶಕ್ಕೆ ಅಗೌರವ ತೋರಿದಲ್ಲದೆ ಆಯೋಗದ ನೀತಿಯನ್ನು ಉಲ್ಲಂಘಿಸಿ ನಮ್ಮನ್ನ ಯಾರು ಏನು ಮಾಡಲಾಗುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಘಟನೆಗಳು ನಡೆಯಬಾರದೆಂದರೆ ಬೇಗನೆ ಸುಕ್ತ ಕ್ರಮ ಕೈಗೊಂಡು ಕಾನೂನು ಎಲ್ಲರಿಗು ಒಂದೆ ಎಂಬುವುದನ್ನ ಜನರಿಗೆ ಮನವರಿಕೆ ಮಾಡುವ ಕೇಲಸವಾಗಬೇಕಾಗಿದೆ.
ಬಾಕ್ಸ್ : ಈ ಗಾಗಲೆ ಸೂಚನೆಯನ್ನು ನೀಡಲಾಗಿದೆ, ಚುನಾವಣೆ ಆಯೋಗದ ಸುಚನೆಯನ್ನು ಪಾಲಿಸದವರ ವಿರುದ್ದ ಸೂಕ್ತ ಕ್ರಮ ಕೈಗೊಳುತ್ತೆವೆ. ತಪಿತಸ್ಥರು ಯಾರೆ ಇದ್ದರು ಕ್ರಮ ಕೈಗೊಳುತ್ತೆವೆ.
ತಾಲೂಕ ದಂಡಾಧಿಕಾರಿ ರಾಜೇಶ್ವರಿ ಎಸ್. ಪಿ.