ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.31: ರಾಮನಗರ ಸೆನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಟಿ. ಗೋವಿಂದ್ ಅವರು 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಬಿ.ಟಿ. ಗೋವಿಂದ್ ಮೈಸೂರಿನ ಪಿರಿಯಾಪಟ್ಟಣ ಗ್ರಾಮದವರಾಗಿದ್ದು ರೈತ ಕುಟುಂಬದಲ್ಲಿ ಜನಿಸಿದ್ದರು. ಸರ್ಕಾರಿ ಗ್ರಾಮಾಂತರ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದರು. ಬಳಿಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕ ವಲಯದಲ್ಲಿ ಖಡಕ್ ಆಫೀಸರ್ ಎಂದೇ ಮೆಚ್ಚುಗೆ ಮತ್ತು ಪ್ರಸಂಶೆಗೆ ಪಾತ್ರರಾಗಿದ್ದರು
ಗೋವಿಂದರಾಜು ಈ ಹಿಂದೆ ಚಿಕ್ಕನಾಯಕನಹಳ್ಳಿ ,ಕೋಲಾರದ ಬೇತಮಂಗಲ, ಮುಳಬಾಗಿಲು, ಬೆಂಗಳೂರಿನ ಕಗ್ಗಲಿಪುರ, ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿ ಪಿಎಸ್ಐ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅದಲ್ಲದೆ ಹೆಬ್ಬಗೊಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧನ ಮಾಡಲು ಹೋಗಿದ್ದ ವೇಳೆ ಆರೋಪಿಗಳು ಮಾರಕಸ್ತ್ರಗಳಿಂದ ದಾಳಿ ಮಾಡಿದಾಗ ಆತ್ಮ ರಕ್ಷಣೆಗಾಗಿ ಗುಂಡು ಸಹ ಹಾರಿಸಿದ್ದರು.
ನಂತರ ಬಡ್ತಿಹೊಂದಿ ರಾಮನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ.