ಮುಲ ಬಿಜೆಪಿಗನನ್ನು ಕಡೆಗಣಿಸಿತು ಜೇವರ್ಗಿ ಬಿಜೆಪಿ ಮಂಡಲ
ಜೇವರ್ಗಿ ೦೪ : ಕರ್ನಾಟಕ ರಾಜ್ಯಾದ್ಯಂತ ಬಿಜೆಪಿ ಪಕ್ಷವು ವಿಜಯ ಸಂಕಲ್ಪ ಯಾತ್ರೆಯನ್ನು ಮಾಡಲಾಗುತ್ತಿದೆ. ಅದರಂತೆ ಜೇವರ್ಗಿಯಲ್ಲಿ ನಾಳೆ ಸೋಮವಾರ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ, ಅದರ ಸ್ವಾಗತ ಬ್ಯಾನರ್ಗಳಲ್ಲಿ ಮುಲ ಬಿಜೆಪಿಗರನ್ನ ಮರೆತು ಕಾರ್ಯಕರ್ತರ ಆಕ್ರೋಷಕ್ಕೆ ಜೇವರ್ಗಿ ಬಿಜೆಪಿ ಮಂಡಲ ಗುರಿಯಾಗುತ್ತಿದೆ.
ಜೇವರ್ಗಿ ತಾಲೂಕಿಗೆ ೧೯೯೪ ರ ನಂತರ ಬಿಜೆಪಿಯನ್ನು ಪರಿಚಯಿಸಿದ್ದು ಹಾಗೂ ಬಿಜೆಪಿಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಧರ್ಮಣ್ಣ ದೊಡ್ಮನಿ. ಪ್ರಸ್ತುತ ರಾಜ್ಯ ಕುರಿ ಮತ್ತು ಉಣ್ಣಿ ನಿಗಮ ಮಂಡಳಿ ಅಧ್ಯಕ್ಷರಾದ ಧರ್ಮಣ್ಣ ದೊಡ್ಮನಿ ಅವರ ಭಾವಚಿತ್ರವನ್ನು ವಿಜಯ ಸಂಕಲ್ಪ ಯಾತ್ರೆಯ ಸ್ವಾಗತ ಭ್ಯಾನರ್ಗಳಲ್ಲಿ ಮರೆತಿರುವುದು ವಿಪರ್ಯಾಸವೇ ಸರಿ.
ಬಿಜೆಪಿಯ ಮುಖಂಡರಲ್ಲಿ ಅನೇಕ ಭಿನಮತಗಳಿರಬಹುದು ಆದರೆ ಒಂದು ನಿಗಮ ಮಂಡಳಿಯ ಅಧ್ಯಕ್ಷರನ್ನು ಕಡೆಗಣಿಸುವುದು ಪಕ್ಷಕ್ಕೆ ಶೋಭೆ ತರುವಂತದಲ್ಲ. ಜೇವರ್ಗಿಯಲ್ಲಿ ಅನೇಕ ಯುವಕರನ್ನು ಪಕ್ಷಕ್ಕೆ ಕರೆ ತಂದು ತಳಮಟ್ಟದಿಂದ ಪಕ್ಷವನ್ನು ಬೆಳೆಸಿದ ಏಕೈಕ ನಾಯಕ ಇವರು. ಬಿಜೆಪಿಯನ್ನು ಹೊರತು ಪಡಿಸಿ ಮತ್ತೆ ಯಾವುದೆ ಪಕ್ಷಕ್ಕೆ ಹೊದವರಲ್ಲ, ಅವರ ಕೊಡುಗೆಯಿಂದಲೆ ಜೇವರ್ಗಿಯಲ್ಲಿ ಇಂದು ಬಿಜೆಪಿ ನೇಲೆನಿಂತಿದೆ ಎಂದರು ತಪ್ಪಾಗಲಾರದು. ಪಕ್ಷದ ಎಳಿಗೆಗೆ ಕಾರಣರಾದ ಧರ್ಮಣ್ಣ ದೊಡ್ಮನಿ ಯವರನ್ನು ಜೇವರ್ಗಿ ತಾಲೂಕ ಮಂಡಲ ಯಾಕೆ ಮರೆತಿದೆ ಎಂಬುವುದೆ ಪ್ರಶ್ನೆಯಾಗಿದೆ.
ಜೇವರ್ಗಿ:ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಭಿಮರಾಯ ಗುಜಗುಂಡ, ರೆವಣಸಿದ್ದಪ್ಪ ಸಂಕಾಲಿ, ಸಾಯಬಣ್ಣ ದೊಡ್ಮನಿ, ಸುರೇಶ ಕಟ್ಟಿ ಸಂಗಾವಿ, ವಿಶ್ವನಾಥ ಇಮ್ಮಣಿ, ಕಂಠ್ಯಪ್ಪ ಮಾಸ್ಟರ ಹರವಾಳ, ಬಾಗೇಶ ಹೊತಿನಮಡು. ಇದ್ದರು.
ಪಕ್ಷದಲ್ಲಿರುವ ಭಿನ ಮತ ಹಾಗೂ ಒಬ್ಬರ ಮೇಲೆ ಇನ್ನೋಬ್ಬರಿಗಿರುವ ವೈಮನಸು ಸತ್ಯವಿರಬಹುದು ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಪಕ್ಷದ ಕೆಲವು ಕಾರ್ಯಕರ್ತರು ಹಾಗೂ ಕುರುಬ ಸಮಾಜ ಸೇರಿದಂತೆ ಧರ್ಮಣ್ಣ ದೊಡ್ಮನಿ ಯವರ ಅಭಿಮಾನಿಗಳು ಜೇವರ್ಗಿ ತಾಲೂಕ ಬಿಜೆಪಿ ಮಂಡಲದ ಮೇಲೆ ಕೆಂಡಮoಡಲವಾಗಿದೆ. ಪಕ್ಷ ಬೆಳೆಸುವುದನ್ನು ಬಿಟ್ಟು ಇನ್ನೊಬ್ಬರ ಕಾಲೆಳೆಯುವುದು ಪಕ್ಷದಲ್ಲಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಶನಿವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅನೇಕ ಮುಖಂಡರು ಗೈರಾಗಿದ್ದರು.