ಜೇವರ್ಗಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬೃಹತ್ ರೋಡ್ ಶೋ
ದೊಡ್ಡಪ್ಪಗೌಡರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡುವಂತೆ ಅಭಿಮಾನಿಗಳ ಕೂಗು
ಜೇವರ್ಗಿ,ಮಾ.6 : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ ನಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿತ್ತು.
ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ ನಿಂದ ಆರಂಭವಾದ ರೋಡ್ ಶೋ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದರು. ರೋಡ್ ಶೋ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ಪರ ಜೈಕಾರ ಮೊಳಗಿಸಿದರು.
ರೋಡ್ ಶೋ ಬಸವೇಶ್ವರ ವೃತ್ತ ತಲುಪಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಮಾತನಾಡಿ, ಜೇವರ್ಗಿಯ ಮತದಾರರು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅದ್ದೂರಿಯಾಗಿ ಸ್ವಾಗತ ಮಾಡಿದ್ದಕ್ಕೆ ಅಭಿನಂದನೆ ಸಲ್ಲುಸುತ್ತೇನೆ ಎಂದು ಹೇಳಿದರು. ಅಭ್ಯರ್ಥಿ ಯಾರಾಗಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು. ನಮ್ಮ ನಮ್ಮಲ್ಲಿ ಕಿತ್ತಾಟಗಳು ಬೇಡ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಾಕ್ಸ್: ಮಾಜಿ ಶಾಸಕ ದೊಡ್ಡಪ್ಪಗೌಡರ ಅಭಿಮಾನಿಗಳು ಜೇವರ್ಗಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ರಥದ ಎದುರುಗಡೆ ಮನವಿ ಮಾಡಿದರು. ನಂತರ ಪೊಲೀಸ್ ಸಿಬ್ಬಂದಿಗಳು ಮಾಜಿ ಮುಖ್ಯಮಂತ್ರಿಗಳ ವಾಹನ ಹೋಗಲು ದಾರಿ ಮಾಡಿಕೊಟ್ಟರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಭಗವಂತ್ ಖೂಬಾ, ರಾಜ್ಯದ ಸಚಿವ ಶ್ರೀರಾಮುಲು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ರಘುನಾಥ್ರಾವ್ ಮಲ್ಕಾಪುರೆ, ಶಶಿಲ್ ಜಿ ನಮೋಶಿ, ವಿಜೇಯಂದ್ರ ಯಡಿಯೂರಪ್ಪ, ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ, ಮಾಜಿ ಎಂಎಲ್ಸಿ ಅಮರನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ, ದಂಡಪ್ಪ ಸಾಹು ಕುಳಗೇರಾ, ಮಲ್ಲಿನಾಥ್ ಗೌಡ ಯಲಗೋಡ, ರೇವಣಸಿದ್ದಪ್ಪ ಸಂಕಲಿ, ಶ್ರೀಮತಿ ಶೋಭಾ ಬಾಣೀ, ಮರೆಪ್ಪ ಬಡಿಗೇರ, ಶ್ರೀಮತಿ ಗಂಗೂಬಾಯಿ ಜಟ್ಟಿಂಗರಾಯ ಪುರಸಭೆ ಅಧ್ಯಕ್ಷರು, ಸಂಗನಗೌಡ ರದ್ದೇವಡಗಿ ಪುರಸಭೆ ಉಪಾಧ್ಯಕ್ಷರು, ಭೀಮರಾಯ ಆರ್ ಗುಜುಗುಂಡ, ಸಾಯಿಬಣ್ಣ ದೊಡ್ಡಮನಿ, ನಿಂಗಣ್ಣ ಬಂಡಾರಿ, ಬಸವರಾಜ ಪಾಟೀಲ್ ನರಿಬೋಳ, ವಿಶ್ವನಾಥ್ ಇಮ್ಮಣ್ಣಿ, ಸಂತೋಷ್ ಮಲ್ಲಾಬಾದ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.