ಸಿಂಗ್ ಪಾಟೀಲ ಹಿರೇಮಠ ಅವರಿಗೆ ರಾಜಕೀಯ ರಾಜಕೀಯವಾಗಿ ಬೆಳೆಸಿದ್ದು ರದ್ದೇವಾಡಗೆ ಕುಟುಂಬ
ಅಜ್ಜ ಮತ್ತು ತಂದೆ ಕನಸು ಶಿವರಾಜ್ ಪಾಟೀಲರಿಂದ ನನಸಾಗುವುದು
ಜೇವರ್ಗಿ:-ತಾಲೂಕಿನ ಗೌರವಾನ್ವಿತ ರದ್ದೇವಾಡಗಿ ಗೌಡರ ಕುಟುಂಬ 3 ತಲೆಮಾರುಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಜಿಲ್ಲೆಯ ಏಕೈಕ ಕುಟುಂಬ ಎಂದರೆ ಅದು ರದ್ದೇವಾಡಗಿಯ ದಿ ಬಸವಂತರಾಯಗೌಡ ಪಾಟೀಲರ ಮನೆತನ ಇವರು ಸರಳ ಸಜ್ಜನ ಪ್ರಾಮಾಣಿಕ ಅಪರೂಪದ ಆದರ್ಷದ ಮೇರು ವ್ಯಕ್ತಿತ್ವದ ಸಹೃದಯಿಗಳು ಹಾಗೂ ಅತ್ಯಂತ ಬಲಾಡ್ಯ ವ್ಯಕ್ತಿಯಾಗಿದ್ದರು.
ಜನ ಸಾಮನ್ಯರು ಹಾಗೂ ಅಧಿಕಾರಿಗಳು ರಾಜಕೀಯ ಮುಖಂಡರೊಂದಿಗೆ ಇವರು ಭಾವನಾತ್ಮಕ ಸಂಬಂಧ ಹೊಂದಿದ್ದರು ಇವರ ಮನೋಭಾವ ವರ್ತಮಾನಾತ್ಮಕ ವ್ಯಕ್ತಿತ್ವದ ಸಿದ್ಧಾಂತಗಳನ್ನು ಹೊಂದಿದ್ದರು ಅವರು ನಮ್ಮ ಭಾಗದಲ್ಲಿ ಎಷ್ಟು ಪ್ರಭಾವಿ ಆಗಿದ್ದರು ಅಂದರೆ ಇವರು ಮನಸ್ಸು ಮಾಡಿದರೆ ಒಬ್ಬ ಸಾಮಾನ್ಯ ಮನುಷ್ಯನನ್ನು ಕೂಡ ಶಾಸಕ ಸಚಿವ ಮಾಡುವಷ್ಟರ ಮಟ್ಟಿಗೆ ಇದ್ದರು ಅವರ ಕಾಲದಲ್ಲಿ ಜೇವರ್ಗಿಯಲ್ಲಿ ಬಸ್ ನಿಲ್ಲುತ್ತಿರಲಿಲ್ಲ ಗೌಡರು ಬರುತ್ತಾರೆಂದರೆ ರದ್ದೇವಾಡಗಿ ಕ್ರಾಸ್ ನಲ್ಲಿ ಅವರಿಗಾಗಿ ಬಸ್ ಬಂದು ಕಾಯುತ್ತಿತ್ತು ಇದನ್ನು ತಿಳಿದ ಜನ ರದ್ದೇವಾಡಗಿ ಕ್ರಾಸ್ ಕಡೆ ಬರುತ್ತಿದ್ದರು ಗೌಡರು ಬಸ್ಸಿನಲ್ಲಿ ಕುಳಿತು ಇಳಿಯುವವರೆಗೆ ಆ ಬಸ್ಸಿಗೆ ಎರಿಳಿದ ಎಲ್ಲರಿಗು ಟಿಕೆಟ್ ಗೌಡ್ರೆ ಕೋಡುತ್ತಿದ್ದರು ಇದು ಅವರ ದೊಡ್ಡ ಗುಣ ಆಗಿತ್ತು ಯಾರಿಗೆಲ್ಲ ಏನೇನೋ ಮಾಡಿದರು ಇವರು ಮಾತ್ರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿಮೀತರಾದರು ಮುಂದೆ ಇವರಿಂದ ಮರೆಯದ ಸಹಾಯ ಸಹಕಾರ ಅಧಿಕಾರ ಅಂತಸ್ತು ಪಡೆದವರು ಇವರ ಸುಪುತ್ರ ಜಿಲ್ಲೆ ತಾಲೂಕಿನಲ್ಲ ಅತ್ಯಂತ ಸರಳತೆಯ ಸಾಕಾರ ಮೂರ್ತಿ ಗೌರವಾನ್ವಿತ ಗೌಡರೆಂದೆ ನಮ್ಮ ಭಾಗದಲ್ಲಿ ಖ್ಯಾತಿಯಾದವರು ದಿ ಅಪ್ಪಾಸಾಬಗೌಡ ಪಾಟೀಲ ರದ್ದೇವಾಡಗಿ ಗೌಡರು ಅವರಿಗೆ ಕೇವಲ 1987 ರಲ್ಲಿ ಜಿಲ್ಲಾ ಪರಿಷತ್ ಟಿಕೆಟ್ ನೀಡದೆ ಅವಮಾನಸಿ ಅವರ ಕುಟುಂಬ ಕಷ್ಟ ಪಟ್ಟು ಕಟ್ಟಿದ ಪಕ್ಷ ಬಿಟ್ಟು ಹೋಗುವಂತ ಪರಿಸ್ಥಿತಿ ನಿರ್ಮಾಣವಾಯಿತು ನಮಗಾಗದವರಿಗೂ ಬರಲೆ ಬಾರದು ಅಂತ ನೋವು ದುಃಖ ಕಷ್ಟ ಅವಮಾನ ಅಪಮಾನ ಇದೆಲ್ಲವನ್ನು ಸಹಿಸಿಕೊಂಡ ಗೌಡರು ಬಾರದ ಒಲ್ಲದ ಮನಸಿನಿಂದ 1987 ರಲ್ಲಿ ಜನತಾ ಪರಿವಾರಕ್ಕೆ ಹೊಗುತ್ತರೆ ಅವರಿಗಲ್ಲಿ ರಾಜ ಮರಿಯಾದಿ ಆ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ 4 ಸ್ಥಾನ ಜನತಾ ಪರಿವಾರ ಗೆಲುವು ಸಾಧಿಸಿತು ಇದು ಗೌಡರಿಗೆ ಜನ ನೀಡಿದ ಅಲ್ಪ ಸಮಾಧಾನವು ಕೂಡ ಆಗಿತ್ತು ಇಲ್ಲಿ ಶಿವಲಿಂಗಪ್ಪ ಗೌಡ ಪಾಟೀಲ ನರಿಬೋಳ ಮತ್ತು ಕೆದರಲಿಂಗಯ್ಯ ಹಿರೆಮಠರು ರಾಜಕೀಯದಲ್ಲಿ ಬೆಳೆಯಲಿಕ್ಕೆ ಸಾಧ್ಯವಾಯಿತು ಮುಂದೆ ಗೌಡರಿಗೂ ಅಲ್ಲಿ ಭವ್ಯ ಗೌರವ ನೀಡಲಾಯಿತು ಅವರನ್ನು ಪಕ್ಷದ ತಾಲೂಕಾ ಅಧ್ಯಕ್ಷರನ್ನಾಗಿ ಮುಂದೆ 1989 ರಲ್ಲಿ ವಿಧಾನ ಸಭೆಗೆ ಟಿಕೆಟ್ ಕೂಡ ನೀಡಲಾಯಿತು.
ಈ ಸಂದರ್ಭದಲ್ಲಿ ಅಪ್ಪಾಸಾಬ ಗೌಡರ ಅಪಾರ ಅಭಿಮಾನಿಗಳು ಮಾನಸಿಕ ಹಿಂಸೆ ನೋವು ಅನುಭವಿಸಿದರು ತಾವೇ ಬಾಡುವ ಬಳ್ಳಿಗೆ ನೀರುಣಿಸಿ ಬೆಳೆಸಿದ ಇವರ ಸ್ಪರ್ಧೆ ಕಂಡು ಹಿಂದೆ ಸರಿಯಲಿಲ್ಲ ಎನ್ನುವ ನೋವು ಅಂದು ಅನೇಕರಲ್ಲಿ ಕಂಡು ಬಂತು ನಂತರ ಗೌಡರು ನೀರಿಂದ ಹೊರಬಿದ್ದ ಮೀನಿನಂತೆ ಪಕ್ಷದಿಂದ ಪಕ್ಷಕ್ಕೆ ತಿರುಗಿದರು ಎಲ್ಲವೂ ಮರೆತ ಹೃದಯ ಸಾಮ್ರಾಟ್ ಸಹೃದಯಿಗಳು ಮೃದು ಮನಸ್ಸಿನ ಗೌಡರು ಪುನಃ ಅವಮಾನಿಸಿದವರಿಗೆ 2004 ರಲ್ಲಿ ಮಾತ್ರ ಪಕ್ಷಕ್ಕೆ ಹೋಗಿ ಮಾಡಿದರು ಮರೆಯದ ಮಮಕಾರ ಈ ರಾಜ್ಯದ ಮುಖ್ಯಮಂತ್ರಿ ಆಗಲು ಕಾರಣಕರ್ತರಾದರು ಆದರೂ ಅವರಿಗೆ ಸಿಗಲಿಲ್ಲ ಅಲ್ಲಿ ಮತ್ತೆ ಗೌರವ ಇಷ್ಟಾದರೂ ಬರಲಿಲ್ಲ ಭಗವಂತನಿಗೆ ಗೌಡರ ಮೇಲೆ ಕರುಣೆ ಮತ್ತೆ ಮಾಡಿದರು ಪಕ್ಷಾಂತರ ಆಗ ಗೌಡರಿಗೆ ಸಿಕ್ಕಿದ್ದೆ ಕೊಟ್ಟ ಮಾತು ತಪ್ಪದ ದಿಟ್ಟ ದಿಮಂತ್ ನಾಯಕ ಬಿ ಎಸ್ ಯಡಿಯೂರಪ್ಪನವರು ಸೂಚಿಸಿದರು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತ್ಯಾಗಮಯಿ ಗೌಡರು ಟಿಕೆಟ್ ನೀಡಿದರೂ ಅವಕಾಶ ಕೊಟ್ಟರು ಮಲ್ಲಿನಾಥ ಗೌಡರಿಗೆ ಬರಿ ಆಯುತ್ತು ಗೌಡರ ಗೋಳು ಇಲ್ಲಿಯೂ ಮಾಡಿದರು ತ್ಯಾಗ ಮತ್ತೆ ಮಾತು ತಪ್ಪದ ಯಡಿಯೂರಪ್ಪನವರು ವಿಧಾನ ಪರಿಷತ್ ಚುನಾವಣೆಗೆ ನಿಲ್ಲೆಂದು ಆಪ್ತರಾದ ಎಂ ವೈ ಪಾಟೀಲ ಹಾಗೂ ರಘುನಾಥ ಮಲ್ಕಾಪುರೆ ಅವರನ್ನು ಅಪ್ಪಾಸಾಬ ಗೌಡರ ಮನೆಗೆ ಕಳಿಸಿದರು ಆಗ ಗೌಡರ ಆರೋಗ್ಯ್ ಕೈಕೊಟ್ಟಿತ್ತು ನಯವಾಗಿ ತಿರಸ್ಕರಿಸಿದರು.
ವಿಧಾನ ಪರಿಷತ್ ಟಿಕೆಟ್ ಭವಿಷ್ಯದಲ್ಲಿ ಆಗಲಿಲ್ಲ. ಶಾಸಕ ಸಚಿವ ಒಂದಿನ.ಕರಾಳ ದಿನ ಬಂದೇ ಬಿಟ್ಟಿತು ಘನತೆ ಗೌರವಕ್ಕೆ ದಕ್ಕೆ ತರದ ಗೌರವಾನ್ವಿತ ಗೌಡರೆಂದೆ ಜಿಲ್ಲೆ ತಾಲೂಕಿನಲ್ಲಿ ಹೆಸರುವಾಸಿಯಾದ ಮನೆತನದ ನಂದಾ ದೀಪವಾಗಿದ್ದ ಗೌಡರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದರು. ಒಂದು ಕ್ಷಣ ಗೌಡರ ಅಭಿಮಾನಿಗಳು ಮೌನವಾದರು ದಿಕ್ಕು ತೋಚದೇ ಜನ ಸಾಗರೊಪ್ಪಾದಿಯಾಗಿ ಭಾಗವಹಿಸಿದ್ದರು.
ಅಂತ್ಯಕ್ರಿಯೆಯಲ್ಲಿ ಬಂದವರೆಲ್ಲ ನಮ್ಮ ಗೌಡರು ಶಾಸಕ ಸಚಿವ ರಾಗಬೇಕಿತೆಂದು ಭಾಷಣ ಮಾಡಿ ಹೊಗಳಿದ್ದೇ ಹೊಗಳಿದ್ದು ಆಯಿತು ಅಂತ್ಯಕ್ರಿಯೆ ಅಭಿಮಾನಿಗಳಿಗೆ ಮುಂದೆ ದಾರಿ ಕಾಣದಾದಾಗ ಕಂಡಿದ್ದೆ ಬಸವಂತರಾಯಗೌಡರ ಮೊಮ್ಮಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿಲ್ಲಾ ಗ್ರಾಮಾಂತರ ಭಾಜಪ ಅಧ್ಯಕ್ಷರಾದ ಶ್ರೀ ಶಿವರಾಜ್ ಅಪ್ಪಾಸಾಬ ಪಾಟೀಲ ರದ್ದೇವಾಡಗಿ ಯವರು.ಹೀಗೆ ಒಂದು ಕುಟುಂಬದ ಮೂರು ತಲೆಮಾರಿನ ರಾಜಕೀಯ ಕಲಬುರ್ಗಿ ಜಿಲ್ಲೆಯ ಏಕೈಕ ಮನೆತನ ರದ್ದೇವಾಡಗಿ ಕುಟುಂಬ ಅಂತ ಹೆಮ್ಮೆಯಿಂದ ಹೇಳಬೇಕಾಗುತ್ತದೆ.
ಇಷ್ಟೇ ಅಲ್ಲದೆ ಧೀಮಂತ ನಾಯಕರೇನಿಸಿದ ಧರ್ಮಸಿಂಗ್ ಅವರನ್ನು ರಾಜಕೀಯ ರಣರಂಗದಲ್ಲಿ ಕರೆತಂದದ್ದು ರದ್ದೇವಾಡಗೆ ಕುಟುಂಬ ತಾಲೂಕಿನ ಶಾಸಕರಾಗಿದ್ದರು ರದ್ದೇವಡಿಗೆ ಕುಟುಂಬದ ಮಾತನ್ನು ಮೀರಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಧರ್ಮಸಿಂಗ್ ಅವರು. ಆದರೆ ಧರ್ಮಸಿಂಗ್ ಅವರ ಪಕ್ಷ ರದ್ದೇವಡಿಗೆ ಕುಟುಂಬಕ್ಕೆ ಯಾವುದೇ ರಾಜಕೀಯ ಸ್ಥಾನಮಾನ ನೀಡಲಿಲ್ಲ. ಅದೇ ರೀತಿ ರದ್ದೇವಡಗಿ ಕುಟುಂಬದ ಯುವ ನಾಯಕರದ ಶಿವರಾಜ್ ಪಾಟೀಲ್ ಅವರಿಗೂ ಕೂಡ ಕಾಂಗ್ರೆಸ್ ಪಕ್ಷ ಗೌರವ ನೀಡಲಿಲ್ಲ ಅದಕ್ಕೆ ರದ್ದೆವಾಡಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಹೋಗಿ ಸ್ವಂತ ಬಲದಿಂದ ಕೋಳಕೂರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಮತ್ತೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಶಾಸಕರನ್ನು ಭರ್ಜರಿಯಾಗಿ ಗೆಲ್ಲಿಸಿಕೊಂಡು ಬರುವಂತ ಕಾರ್ಯ ಮಾಡಿದ್ದಾರೆ. ಇಂತಹ ನಾಯಕನನ್ನು ಬಿಜೆಪಿ ಪಕ್ಷ 2023 ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದೆಯಾ ಅಂತ ಕಾದು ನೋಡುತ್ತಿದ್ದಾರೆ ಜೇವರ್ಗಿ ಮತದಾರರು.