ತರಕಾರಿ ಮಾರುಕಟ್ಟೆ ಉದ್ಘಾಟನೆ ತಡೆಯುವಂತೆ ದಂಡಾಧಿಕಾರಿಗಳಿಗೆ ಮನವಿ: ಬಿಜೆಪಿ ಪಕ್ಷ
ಜೇವರ್ಗಿ:ಪಟ್ಟಣದಲ್ಲಿ ನೂತನವಾಗಿ ಅಪೂರ್ಣ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆ ಉದ್ಘಾಟನೆ ತಡೆ ಹಿಡಿಯಬೇಕೆಂದು ಜೇವರ್ಗಿ ಜನಪ್ರಿಯ ಮಾಜಿ ಜಿಪಂ ಸದಸ್ಯರಾದ ಬಸವರಾಜ ಪಾಟೀಲ ನರಿಬೋಳ ಅವರು ಹಾಗೂ ಜೇವರ್ಗಿ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು,ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಜೇವರ್ಗಿ ತಹಸೀಲ್ದಾರ ರವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಷಣ್ಮುಖಪ್ಪ ಸಾಹು ಗೋಗಿ,ಅಧ್ಯಕ್ಷೆ ಗಂಗೂಬಾಯಿ ಮಂದ್ರವಾಡ,ಉಪಾಧ್ಯಕ್ಷ ಸಂಗಣ್ಣಗೌಡ ಪಾಟೀಲ ರದ್ದೇವಾಡಗಿ,ಗುಂಡು ಸಾಹು ಗೋಗಿ,ಗುರುಗೌಡ ಮಾಲಿ ಪಾಟೀಲ, ಸಿದ್ದರಾಮ ಯಳಸಂಗಿ,ರಾಜು ರದ್ದೇವಾಡಗಿ, ಹಣಮಂತ ಶಾಹಾಬಾದಕರ್, ಮಲ್ಲಿಕಾರ್ಜುನ ಭಂಜತ್ರೀ,ವಿಶ್ವನಾಥ ಇಮ್ಮಣಿ,ತಾಪಂ ಸದಸ್ಯರಾದ ಮಹಾಂತೇಶ್ ಪವಾರ, ಹಣಮಂತರಾವ್ ಹೋತ್ತಿನಮುಡು,ರಾಜು ತಳವಾರ,ಅತೀಕ್ ಶೇಠ,ಭೀಮು ಹಳ್ಳಿ,ವಿಜಯಕುಮಾರ ನರಿಬೋಳ ಸೇರಿದಂತೆ ಅನೇಕರು ಇದ್ಥರು.