851ನೇ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಆಚರಣೆ
ದುಡಿಯುವ ಜನವಾಗಬೇಕೇ ಹೊರತು ಕುಡಿಯುವ ಜನ ಆಗಬಾರದು ; ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 851ನೆಯ ಜಯಂತೋತ್ಸವ ಹಾಗೂ ಜನ ಜಾಗೃತಿ ಸಮಾವೇಶವನ್ನು ಶಾಸಕ ಡಾ. ಅಜಯಸಿಂಗ್ ಡಾ. ಶಿವಾನಂದ ಮಹಸ್ವಾಮಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀ, ಗುರುಲಿಂಗ ಮಹಸ್ವಾಮಿ, ಸಿದ್ದಬಸವ ಕಬೀರ ಮಹಸ್ವಾಮೀ ಜೋತಿ ಬೆಳಗಿಸಿವುದರ ಮುಲಕ ಉದ್ಘಾಟಿಸಿದರು.
ಜೇವರ್ಗಿ 14 : ಸಮಾಜದಲ್ಲಿ ದುಡಿಯುವ ಜನ ಆಗಬೇಕೇ ಹೊರತು ಕುಡಿಯುವ ಜನ ಆಗಬಾರದು ಎಂದು ಚಿತ್ರದುರ್ಗ ಭೋವಿ ಗುರುಪೀಠ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಮತಪಟ್ಟರು.
ಪಟ್ಟಣದ ಹಳೆ ತಹಸೀಲ್ ಕಚೇರಿ ಆವರಣದಲ್ಲಿ ಮಂಗಳವಾರ ತಾಲೂಕ ಭೋವಿ ಸಮಾಜದ ವತಿಯಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 851ನೆಯ ಜಯಂತೋತ್ಸವ ಹಾಗೂ ಜನ ಜಾಗೃತಿ ಸಮಾವೇಶ ಜರುಗಿತು.
ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರ ಜೀವನದಲ್ಲಿ ಪರಿವರ್ತನೆ ಬಹಳ ಮುಖ್ಯ ಘಟ ನಾವು ಸಮಾಜಕ್ಕೆ ದುಡಿಯುವದರ ಮೂಲಕ ಜಾಗೃತವಾಗಿ ಬಾಳಬೇಕು. ಜಯಂತಿಗಳು ಜಾತ್ರೆಗಳಾಗದೆ ಜಾಗೃತಿ ತಾಣಗಳಾಗಬೇಕು ಮನುಷ್ಯನ ಜೀವನದಲ್ಲಿ ಯೌವ್ವನ , ಅಧಿಕಾರ, ಅಂಹಕಾರದಿoದ ದುರಂಹಕಾರಕ್ಕೆ ಒಳಗಾಗದೆ ಶಿಕ್ಷಣದ ಮೂಲಕ ಪರಿವರ್ತನೆಗೊಂಡು ಸಮಾಜ ಸುಧಾರಿಸಬೇಕು ಎಂದು ಹೇಳಿದರು.
ನಂತರ ಶಾಸಕ ಡಾ. ಅಜಯ್ ಸಿಂಗ್ ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬ ಧರ್ಮಯೋಗಿ ಜನ ಕಲ್ಯಾಣದಲ್ಲಿ ತೊಡಗಿದ ಶಿವಯೋಗಿ. ವಚನಗಳು ಉಳುವಿಗಾಗಿ ಕ್ರಾಂತಿಹಾಡಿದ ಮಹಾ ಯೋಗಿಯಾಗಿದ್ದರು, 2024 ರ ಒಳಗಾಗಿ ಭೋವಿ ಸಮುದಾಯದ ಭವನ ಕಟ್ಟಡ ನಿರ್ಮಾಣ ಮಾಡುವೆ ಎಂದು ಭರವಸೆ ನೀಡಿದರು.
ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ರವಿಚಂದ್ರ ಗುತ್ತೇದಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಯುವಕರು ಕೇವಲ ತಮ್ಮ ಕಾಯಕವನ್ನು ಮಾಡದೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ದೇಶದ ಉನ್ನತ ನಾಗರಿಕರಾಗಿ ಮಾಡುವುದು ಸಮಾಜದ ಹಿರಿಯರ ಮೇಲಿದೆ. ಅದಕ್ಕಾಗಿ ಭೂವಿ ಸಮಾಜದ ಎಲ್ಲಾ ಯುವಕರು ಶಿಕ್ಷಣವಂತರಾಗಿ ದೇಶದ ಉನ್ನತ ಹುದ್ದೆಗಳು ಪಡೆದು ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಬಲಿಷ್ಠರಾಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಡಾ.ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಸೋನ್ನ, ಸಿದ್ದಲಿಂಗ ಶ್ರೀಗಳು ವಿರಕ್ತಮಠ ಯಡ್ರಾಮಿ, ಗುರುಲಿಂಗ ಸ್ವಾಮೀಜಿ ಹರಕೆರ, ಸಿದ್ದ ಬಸವ ಕಬೀರ ಸ್ವಾಮೀಜಿ, ರವಿಚಂದ್ರ ಗುತ್ತೆದಾರ, ಚಂದ್ರಶೇಖರ ಹರನಾಳ, ರಾಜಶೇಖರ್ ಸೀರಿ, ಶಾಂತಪ್ಪ ಕೂಡಲಗಿ, ಶರಣು ಕುಮಾರ್ ದೊಡ್ಮನಿ , ಭೀಮರಾಯ ನಾಗನೂರ, ಮರೆಪ್ಪ ಕೋಬಾಳಕರ್, ಸೋಮಯ್ಯ ನೇದಲಗಿ, ಗಂಗಯ್ಯ ಗುತ್ತೇದಾರ್, ಶರಣು ಗುತ್ತೇದಾರ್, ಭೀಮಾಶಂಕರ ಕುರೆಡಕರ್, ರವಿ ಕೊಳಕೂರ, ಶರಣು ಧಾರವಾಡಕರ್, ದುರ್ಗಮ್ಮ ಗೌನಳ್ಳಿ, ದೀಪಕ್ ಜಾಧವ್, ಪ್ರಕಾಶ ಗುತೆದಾರ, ಮೌನೇಶ ಯಲಗೊಡ, ವಿರೇಶ ಲಿಂಗಸೂರ, ಧಶರಥ ನಿಂಬಳಕರ್, ಮರೆಪ್ಪ ಗುತೆದಾರ, ರಾಜು ಗುತ್ತೆದಾರ, ದೇವಿಂದ್ರ ಬಡಿಗೇರ, ವಿಶ್ವ ಆಲೂರ ಜಡ್.ಪಿ. ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.