ನೆಟೆರೋಗ ದಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ: ಸುಭಾಷ್ ಹೊಸಮನಿ
ಜೇವರ್ಗಿ: ತಾಲೂಕ ಕರ್ನಾಟಕ ರಾಜ್ಯ ರೈತ ಪ್ರಾಂತ್ಯ ಸಂಘದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರುಗಡೆ ಸತ್ಯಾಗ್ರಹ ಜರುಗಿತು.
ರೈತರ ಮತ್ತು ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದ ಅಧ್ಯಕ್ಷರಾದ ಸುಭಾಷ್ ಹೊಸಮನಿ ದಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರಿಲಯನ್ಸ್ ಪೆಟ್ರೋಲ್ ಪಂಪ್ ನಿಂದ ಹಿಡಿದು ತಹಶೀಲ್ದಾರ್ ಕಚೇರಿ ಅವರಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಆಗಮಿಸಿ ದಂಡಾಧಿಕಾರಿಗಳ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಪತ್ರ ರೈತ ಸಂಘ ಸಲ್ಲಿಸಿದರು.
ನೆಟೆರೋಗದಿಂದ ಹಾನಿಯಾದ ತೊಗರಿ ಬೆಳೆಗೆ ಸೂಕ್ತ ಪರಿಹಾರ ರೈತರಿಗೆ ನೀಡುವಂತೆ ಒತ್ತಾಯಿಸಿ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಮಾಡುವಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರೈತ ಪ್ರಾಂತ್ಯ ಸಂಘ ಹೋರಾಟ ಮಾಡುತ್ತಿದೆ ಎಂದು ಸುಭಾಷ್ ಹೊಸಮನಿ ತಾಲೂಕಾಧ್ಯಕ್ಷರು ತಿಳಿಸಿದರು. ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೆಂಕೋಬರಾವ್ ವಾಗಣ್ಗೇರ, ಶಂಕರಲಿಂಗ ರೇವನೊರ, ಶಾಂತಪ್ಪ ಕಟ್ಟಿ, ಉಸ್ಮಾನ್ ಅಲಿ ಹರನುರ, ಸಕ್ರಪ್ಪ ಹರನುರ, ಮಲ್ಕಪ್ಪ ಮ್ಯಾಗೇರಿ, ರಾಜು ಸಾತ್ಕೇಡ್, ರೇವು ಜಾಧವ್, ತೋಟಪ್ಪ ಕೆಳಗಿನಮನಿ ಜನಿವಾರ, ಹನುಮಂತ್ ಕಳಗಿನಮನಿ ಜನಿವಾರ, ವಿವಿಧ ಗ್ರಾಮದಿಂದ ರೈತರು ಈ ಒಂದು ಪ್ರತಿಭಟನೆಗೆ ಆಗಮಿಸಿದ್ದರು.