ಸಾರ್ವಜನಿಕರಗೆ ಟೌನ್ ಹಾಲ್ ಅನುಕುಲ : ಡಾ. ಅಜಯಸಿಂಗ್
2.50 ಕೋಟಿ ವೆಚ್ಚದ ಟೌನ್ ಹಾಲ್ ಉದ್ಘಾಟನೆ, ಮುಂದಿನ ದಿನಗಳಲ್ಲಿ ಮುರ್ತಿ ಪ್ರತಿಷ್ಟಾಪನೆ
ಜೇವರ್ಗಿ ಪಟ್ಟಣದಲ್ಲಿ 2 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಟೌನ್ ಹಾಲ್ ಶಾಸಕ ಡಾ. ಅಜಯಸಿಂಗ್ ಉದ್ಘಾಟಿಸಿದರು.
ಜೇವರ್ಗಿ 29 : ಸಾರ್ವಜನಿಕರ ಅನುಕುಲಕ್ಕಾಗಿ ಸುಮಾರು 2 ಕೋಟಿ 50 ಲಕ್ಷ ವೆಚ್ಚದಲ್ಲಿ ಟೌನ್ ಹಾಲ್ ನಿರ್ಮಾಣಮಾಡಲಾಗಿದೆ ಎಂದು ಶಾಸಕ ಡಾ. ಅಜಯಸಿಂಗ್ ತಿಳಿಸಿದರು.
ಪಟ್ಟಣದ ಹೃದಯ ಬಾಗದ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ಎದುರುಗಡೆ ಟೌನ್ ಹಾಲ್ ಕಟ್ಟಡವನ್ನು ಬುದುವಾರ ಬೆಳಿಗ್ಗೆ 10 45 ಕ್ಕೆ ಶಾಸಕ ಡಾ. ಅಜಯಸಿಂಗ್ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಹೃದಯ ಬಾಗದಲ್ಲಿ ಈ ಸುಂದರ ಕಟ್ಟಡವನ್ನು ನಿರ್ಮಿಸಲಾಗಿದೆ, ಇದರಿಂದ ತಾಲೂಕಿನ ಜನರಿಗೆ ಅನುಕುಲವಾಗುತ್ತದೆ. ಸುಮಾರು 2 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾಗೂ ಇದರ ಸುತ್ತುಗೋಡೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೆ ಡಾ. ಬಿ. ಆರ್. ಅಂಬೇಡ್ಕರ್ ಭವನ, ಕ್ರೀಡಾಂಗಣ, ವಾಲ್ಮೀಕಿ ಭವನ, ಭಂಜಾರ ಭವನ, ತರಕಾರಿ ಮಾರುಕಟ್ಟೆ, ರಸ್ತೆ ದ್ವೀಪಗಳು ಸೇರಿದಂತೆ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಸಿಸಿ ರಸ್ತೆ ಸುಮಾರು 40 ವರ್ಷಗಳ ಕಾಲ ಯಾವುದೆ ತೊಂದರೆ ಇಲ್ಲದೆ ಬಾಳಿಕೆ ಬರುತ್ತದೆ. 1 ಕೋಟಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಪೈಪ್ ಲೈನ್ ಮಾಡಲಾಗುತ್ತದೆ, ಆದ್ದರಿಂದ ಸಿಸಿ ರಸ್ತೆಯ ಪಕ್ಕದಲ್ಲಿ ಇನ್ನು ಸ್ವಲ್ಪ ಸಿಸಿ ಹಾಕದೆ ಹಾಗೇ ಬಿಟ್ಟಿದ್ದೆವೆ. ಮುಂದಿನ ದಿನಗಳಲ್ಲಿ ನೀರಿನ ತೊಂದರೆ ಆಗಬಾರದು ಎಂಬ ಉದ್ದೆಶದಿಂದ ನಿದಾನವಾಗಿ ಕಾಮಗಾರಿಯನ್ನು ಪ್ರಾರಂಬಿಸಲಾಗುತ್ತಿದೆ. ಅದೆರೀತಿ ಕನಕ ಭವನ, ಬಸವ ಭವನ, ಶಾಧೀ ಮಹಲ್, ಅಂಭಿಗರ ಚೌಡಯ್ಯನವರ ಭವನ, ಸೆರಿದಂತೆ ಇನ್ನು ಅನೇಕ ಕಾಮಗಾರಿಗಳು ಮುಂದುವರೆದಿವೆ.
ಈ ಸಂದರ್ಭದಲ್ಲಿ ಲೋಕಪಯೋಗಿ ಇಲಾಖೆಯ ಅದೀಕಾರಿಗಳಾದ, ಭೀಮಸೇನ್ ಜೋಶಿ, ಧನರಾಜ ಚವ್ಹಾಣ, ಮುಜಾಮುದಿನ್, ಸಿದ್ದಲಿಂಗರೆಡ್ಡಿ ಇಟಗಾ, ರುಕುಂಪಟೇಲ್ ಇಜೇರಿ, ಚಂದ್ರಶೇಖರ ಹರನಾಳ, ರಾಜಶೇಖರ ಸೀರಿ, ಶಾಂತಪ್ಪ ಕುಡಲಗಿ, ಸುಭಾಷ ಚನ್ನುರ, ಭೀಮರಾಯ ನಗನೂರ, ಮಾಜೀದಸೇಟ ಗಿರಣಿ, ಬಸಣ್ಣ ಸರಕಾರ, ಶರಣು ಗುತ್ತೆದಾರ, ಗೌಸುದ್ದಿನ, ಶಿವಕುಮಾರ ಕಲ್ಲಾ, ಚಂದದ್ರಶೇಖರ ನೇರಡಗಿ, ರಾಜು ಮುತ್ತಕೊಡ, ರಫೀಕ ಜಮದಾರ, ಗುಂಡು ಗುತ್ತೆದಾರ, ರಾಯಪ್ಪ ಬಾರಿಗಿಡ, ಮರೆಪ್ಪ ಸರಡಗಿ, ಭೀಮು ಆಲಳಕರ್, ವಿನಾಯಕ್ ಸಿಂಗ್ರಿ ಇದ್ದರು.