ಸುದ್ದಿಮೂಲ ವಾರ್ತೆ
ಜೇವರ್ಗಿ ಏ03: ಮುಸ್ಲಿಂ ಸಮುದಾಯದಲ್ಲಿ ಒಗ್ಗಟ್ಟಿಲ್ಲದ ಕಾರಣ ನಮಗೆ ನಮ್ಮ ಹಕ್ಕುಗಳು ಸಿಗುತ್ತಿಲ್ಲ ಆದಕಾರಣ ನವೇಲರು ಒಂದಾಗಿ ನಮ್ಮ ಹಕ್ಕಿನ ಸಲುವಾಗಿ ಹೋರಾಟ ಮಾಡಬೇಕಾಗಿದೆ.
ಪಟ್ಟಣದ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜೇವರ್ಗಿ – ಯಡ್ರಾಮಿ ಮುಸ್ಲಿಂ ಸೌಹಾರ್ವ ವೇದಿಕೆ ಸಂವಿಧಾನ ವಿರೋಧಿ ಮೀಸಲಾತಿ ಕುರಿತು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ ಮುಸ್ಲಿಂ ಸಂದಾಯದ ಜನರು ಇನ್ನೂ ಮುಂದೆ ಜಾಗೃತರಾಗಬೇಕು ಎಂದರು.
ಮುಸ್ಲಿಂ ಗೆ ಕೊಟ್ಟಿರುವ 2 ಬಿ ಮೀಸಲಾತಿಯಿಂದ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎನ್ನುವ ದೃಷ್ಟಿಯಲ್ಲಿ ಈ ಮೀಸಲಾತಿಯನ್ನು ನೀಡಿತ್ತು ಆದರೆ ನಮ್ಮ ಸಮುದಾಯವನ್ನು ಗೂಗಿಸಲು ಮತ್ತು ಆರ್ಥಿಕವಾಗಿ ಮುಂದೆ ಬರಬಾರದು ಎನ್ನುವ ದೃಷ್ಟಿಕೋನದಲ್ಲಿ ಈ ಮೀಸಲಾತಿ ರದ್ದು ಮಾಡಿದರೆ ಎಂದು ಆರೋಪಿಸದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು, ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಹಜರತ ಸೈಯದ್ ಶಾಹ ಮುಸ್ತಫಾ ಖಾದ್ರಿ, ರುಕುಂ ಪಟೇಲ್ ಪೊಲೀಸ್ ಪಾಟೀಲ್, ಶೌಕತ್ಅಲಿ ಆಲೂರ, ಖಾಸಿಂ ಪಟೇಲ್ ಪೊಲೀಸ್ ಪಾಟೀಲ್, ಅಬ್ದುಲ್ ರಹೇಮಾನ್ ಪಟೇಲ್ ಸೇರಿ ಇತರೆ ಗಣ್ಯರು.