ಸುದ್ದಿಮೂಲವಾರ್ತೆ ಮಾನ್ವಿ ಏ-3
ಬಿಜೆಪಿ ಪಕ್ಷದ ಸಂಘಟನೆ, ಬಲವರ್ಧನೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ಉದ್ದೇಶದಿಂದ ಏಪ್ರಿಲ್ 5 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಮಾನ್ವಿ ಪಟ್ಟಣದ ಕಲ್ಮಠ ಧ್ಯಾನಮಂದಿರದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ರೈತ ಮೋರ್ಚಾ ಸಮಾವೇಶವ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಸಿದ್ದನಗೌಡ ನೆಲಹಾಳ ತಿಳಿಸಿದರು.
ಸೋಮವಾರ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಈ ಸಮಾವೇಶವನ್ನು ಚುನಾವಣೆ ನೀತಿ ಸಂಹಿತೆ ಬರುವ ಮುಂಚೆ ಮಾಡಬೇಕಾಗಿತ್ತು ಆದರೆ ಅನ್ಯ ಕಾರಣದಿಂದ ತಡವಾಯ್ತು ಎಂದು ಹೇಳಿದರು. ಆದರೂ ಕೂಡ ಚುನಾವಣೆ ನೀತಿ ಸಂಹಿತೆ ಪ್ರಕಾರ ನಿಯಮ ಪಾಲಿಸಿ ಕಾರ್ಯಕ್ರಮವನ್ನು ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಸಚಿವರಾದ ಭೈರತಿ ಬಸವರಾಜ ಹಾಗೂ ಮಾಚಿ ಸಚಿವ ಮಾಲೀಕಯ್ಯ ಗುತ್ತೆದಾರ ಸೇರಿದಂತೆ ಅನೇಕ ಬಿಜೆಪಿ ಪಕ್ಷದ ಗಣ್ಯರು, ಕೃಷಿಗೆ ಸಂಬಂಧಿಸಿದ ತಜ್ಞರು ಹಾಗೂ ರೈತ ಮೋರ್ಚಾ ಪದಾಧಿಕಾರಿಗಳು, ಮಹಿಳೆಯರು ಭಾಗವಹಿಸುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಸಂಗಾಪುರ, ತಿಮ್ಮಾರೆಡ್ಡಿ ಭೋಗಾವತಿ, ಉಮೇಶ ಸಜ್ಜನ್, ಮಹಾದೇವಪ್ಪಗೌಡ, ಉದಯಕುಮಾರ, ಗುರುಗೌಡ, ರಂಗಪ್ಪ ನಾಯಕ ಜಾನೇಕಲ್, ಮಲ್ಲಾಜಮ್ಮ, ಲಕ್ಷ್ಮೀದೇವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.