ಸುದ್ದಿಮೂಲವಾರ್ತೆ,
ಬೀದರ್,ಏ.೩:ತೀವ್ರ ಕುತೂಹಲ ಕೆರಳಿಸಿದ್ದ ರವೀಂದ್ರ ಸ್ವಾಮಿ ಅವರ ಬೇಡ ಜಂಗಮ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಯೂ ಆಗಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳ ಪರಿಶೀಲನಾ ಸಮಿತಿ ಜಿಲ್ಲಾಧ್ಯಕ್ಷ ಗೋವಿಂದ್ ರೆಡ್ಡಿ ರದ್ದುಪಡಿಸಿ ತೀರ್ಪು ನೀಡಿದ್ದಾರೆ.
ಔರಾದ್ ವಿಧಾನ ಸಭೆಯಿಂದ ಪಕ್ಷೇತರ ಸ್ಪರ್ಧೆಗೆ ಭರ್ಜರಿ ಸಿದ್ಧತೆ ನಡೆಸಿದ್ದ ರವೀಂದ್ರ ಸ್ವಾಮಿ ಹಳ್ಳಿ-ಹಳ್ಳಿಗಳಿಗೂ ಹೋಗಿ ಪ್ರಚಾರ ಆರಂಭಿಸಿದರು. ಈ ನಡುವೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆಯೂ ಚುರುಕುಗೊಂಡಿತ್ತು. ಕಳೆದ ೧೫ ದಿನಗಳಲ್ಲೇ ನಾಲ್ಕೆöÊದು ಬಾರಿ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಸೋಮವಾರ ಅಂತಿಮ ಆದೇಶ ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಅವರು ರವೀಂದ್ರ ಕಲ್ಲಯ್ಯಾ ಸ್ವಾಮಿ, ಸಹಾಯಕ ಆಯುಕ್ತರು ಬೀದರ್, ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರತಿವಾದಿಗಳಾಗಿ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಿದರು.
ರವೀಂದ್ರ ಸ್ವಾಮಿಗೆ ೨೭-೮-೨೦೧೯ರಂದು ಬೀದರ್ ತಹಸೀಲ್ದಾರ್ ನೀಡಿದ ಬೇಡ ಜಂಗಮ ಪ್ರಮಾಣ ಪತ್ರವನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ದಿನಾಂಕ ೩-೪-೨೦೨೩ರಂದು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತಿತ್ತು.
ಸಂಭ್ರಮಾಚರಣೆ : ರವೀಂದ್ರ ಸ್ವಾಮಿ ಬೇಡ ಜಂಗಮ ಪ್ರಮಾಣ ಪತ್ರ ರದ್ದುಪಡಿಸಿದ ಹಿನ್ನೆಲೆ ನಗರದ ಅಂಬೇಡ್ಕರ್ ವೃತದಲ್ಲಿ ದಲಿತ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ವಾದ ಮಂಡಿಸಿದ ಎಸ್.ವಿಲ್ಸನ್, ಬಿ.ಕೃಷ್ಣಪ್ಪ, ರವಿ ಜೈದೋಡ್ಡಿ, ಮಾರುತಿ ಬೌಧ್ದೆ, ಫರ್ನಾಂಡೀಸ್ ಹಿಪ್ಪಳಗಾಂವ, ಮಹೇಶ ಗೋರನಾಳಕರ್ ಮುಂತಾದವರು ಉಪಸ್ಥಿತರಿದ್ದರು.