ಸುದ್ದಿಮೂಲ ವಾರ್ತೆ
ಬೆಂಗಳೂರು, ಏ, 4; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಸಿರುಮಯ ವಾತಾವರಣ ನಿರ್ಮಾಣ ಮಾಡಿರುವ ಕಾರಣದಿಂದ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ಸ್ () ಕೊಡಮಾಡುವ ಪ್ರತಿಷ್ಠಿತ “ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಮಾಣಪತ್ರವನ್ನು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಡೆದುಕೊಂಡಿದೆ.
ವಿಮಾನ ನಿಲ್ದಾಣದಲ್ಲಿ ಹಸಿರು ವಾತಾವರಣ, ವಿನ್ಯಾಸ, ನೀತಿ, ಭೂ ಬಳಕೆ ವರ್ಗೀಕರಣ, ನೀರಿನ ನಿರ್ವಹಣೆ, ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ, ಮಾಹಿತಿ ಮತ್ತು ತಂತ್ರಜ್ಞಾನ (ಐಸಿಟಿ) ಹೀಗೆ ಹತ್ತಾರು ಪರಿಸರ ಸಂರಕ್ಷಣೆ ಯೋಜನೆಗಳನ್ನು ಜಾರಿಗೊಳಿಸಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಸ್ಥಿರ ನಗರಾಭಿವೃದ್ಧಿಗಾಗಿ ಹೊಸ ಮಾನದಂಡಗಳನ್ನು ರೂಪಿಸಿರುವ ಬಿಎಸಿಎಲ್, ಸುಸ್ಥಿರ ಅಭಿವೃದ್ಧಿಯ ಸಮಗ್ರ ದೃಷ್ಟಿಕೋವನ್ನು ಸಾಕಾರಗೊಳಿಸಿದೆ. ಇದಕ್ಕಾಗಿ ಬಿಲ್ಡರ್ಗಳು, ವಿನ್ಯಾಸಕರು ಮತ್ತು ವಾಸ್ತುಶಿಲ್ಪಿಗಳು ಅನುಸರಿಸುವ ಕಡ್ಡಾಯ ನೀತಿ ಮತ್ತು ವಿನ್ಯಾಸ ಕ್ರಮಗಳನ್ನೊಳಗೊಂಡ ಸುಸ್ಥಿರ-ಕೇಂದ್ರಿತ ನಗರ ವಿನ್ಯಾಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ವ್ಯಾಪಾರ ಉದ್ಯಾನವನಗಳು, ಹೋಟೆಲ್ಗಳು, ಸಮಾವೇಶ ಕೇಂದ್ರಗಳು, ಆರೋಗ್ಯ ಕೇಂದ್ರಗಳು, ಲಘು ಕೈಗಾರಿಕಾ ಸೌಲಭ್ಯಗಳು, ಚಿಲ್ಲರೆ ವ್ಯಾಪಾರ ಮತ್ತು ಮನೋರಂಜನೆ ಸೇರಿದಂತೆ ಇನ್ನು ಹಲವು ಕಡೆ ಶೇ. 15ರಷ್ಟು ಪ್ರಮಾಣ ಅಂದರೆ 55 ಎಕರೆ ಕಾಯ್ದಿರಿಸಿದ ಹಸಿರು ಮತ್ತು ತೆರೆದ ಸ್ಥಳಕ್ಕೆ ಮೀಸಲಿಡಲಾಗಿದೆ. ಕೇಂದ್ರ ಸಾರ್ವಜನಿಕ ಹಸಿರು ಮತ್ತು ತೆರೆದ ಸ್ಥಳಕ್ಕಾಗಿಯೇ ಅಭಿವೃದ್ಧಿ ಪಡಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಶೇ.100ರಷ್ಟು ತಡೆ-ಮುಕ್ತ ಪ್ರವೇಶ ಮತ್ತು ಶೇ.100ರಷ್ಟು ರಸ್ತೆ ಸಂಪರ್ಕ ವಲಯಕ್ಕೆ ಮೀಸಲಾದ ಪಾದಚಾರಿ ಮಾರ್ಗಗಳು ಮತ್ತು ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ಮರ ನೆಡುವಿಕೆಯೊಂದಿಗೆ ಬೈಸಿಕಲ್ ಮಾರ್ಗಗಳು, ಕಟ್ಟಡಗಳಿಗೆ ‘ಗ್ರೀನ್ ಬಿಲ್ಡಿಂಗ್’ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಬಹು ಮಾದರಿ ಏಕೀಕರಣಕ್ಕಾಗಿ ಮೆಟ್ರೋ ರೈಲು, ಉಪನಗರ ರೈಲು ಮತ್ತು ಬಸ್ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ.
ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಮರುಬಳಕೆ ವ್ಯವಸ್ಥೆಯು ಶೇ.100ರಷ್ಟು ನಿರ್ವಹಣೆ, ಶೇ.100ರಷ್ಟು ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ನೀರಾವರಿ, ಫ್ಲಶಿಂಗ್ ಮತ್ತು ಹವಾನಿಯಂತ್ರಣಕ್ಕಾಗಿ ಸಂಸ್ಕರಿಸಿದ ನೀರನ್ನು ಶೇ.95ರಷ್ಟು ಮರುಬಳಕೆ ಮಾಡಲು ಅನುಮತಿ, ಇಂಧನ ಮೂಲಗಳ ಮೂಲಕ ಶೇ.100ರಷ್ಟು ನವೀಕರಿಸಬಹುದಾದ ಶಕ್ತಿಯ ಬಳಕೆ, ಶೇ.100ರಷ್ಟು ತ್ಯಾಜ್ಯ ವಿಂಗಡಣೆ, ಕನಿಷ್ಠ ಶೇ.60ರಷ್ಟು ತ್ಯಾಜ್ಯ ಮರುಬಳಕೆ ಮತ್ತು ಶೇ.5 ಕ್ಕಿಂತ ಕಡಿಮೆ ಜಡ ತ್ಯಾಜ್ಯವನ್ನು ಭೂಕುಸಿತಕ್ಕೆ ತಿರುಗಿಸುವ ಸಮಗ್ರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಾಗಿದೆ. ಪ್ಲಾಸ್ಟಿಕ್ನ ಜವಾಬ್ದಾರಿಯುತ ಮರುಬಳಕೆಯ ಹೆಜ್ಜೆಯಾಗಿ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬಳಕೆಗೆ ಒತ್ತು ನೀಡಲಾಗಿದೆ.