ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೪: ಬಿಜೆಪಿ ಸರಕಾರ ಅಂತಿಮ ಸಚಿವ ಸಂಪುಟದ ಸಭೆಯಲ್ಲಿ ಒಳಮೀಸಲಾತಿ ಶಿಫಾರಸ್ಸು ಮಾಡಿ ಲಂಬಾಣಿ, ಬೋವಿ, ಕೊರಚ, ಕೊರಮ ಅನ್ಯಾಯ ಮಾಡಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಮುಖ್ಯ ವಕ್ತಾರ ಪ್ರಕಾಶ ರಾಠೋಡ್ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ ರಾಠೋಡ ಒಂದು ಸಮುದಾಯ ಓಲೈಸಲು ಉಳಿದ ಸಮುದಾಯಗಳಿಗೆ ಅನ್ಯಾಯ ಮಾಡಿದೆ.ಇದು ದಲಿತ ವಿರೋಧಿ ಸರಕಾರ. ಶೋಷಿತರು ಕೆಳಸ್ತರದಲ್ಲಿಯೇ ಇರಬೇಕು ಎಂಬುದು ಬಿಜೆಪಿ ಹುನ್ನಾರವಾಗಿದೆ ಎಂದರು.
ಸದಾಶಿವ ಆಯೋಗದ ವರದಿಯಲ್ಲಿ ಸಾಕಷ್ಟು ಗೊಂದಲವಿದ್ದ ಕಾರಣ ನಮ್ಮ ಕಾಂಗ್ರೆಸ್ ಸರಕಾರ ಶಿಫಾರಸ್ಸು ಮಾಡಿರಲಿಲ್ಲ. ವರದಿ ಶಿಫಾರಸ್ಸು ಮಾಡಿರುವುದು ಬಿಜೆಪಿ ಸರಕಾರದ ಚುನಾವಣೆಯ ಗಿಮಿಕ್ ಆಗಿದೆ. ಅಸಂವಿಧಾನಿಕ ನಿರ್ಣಯವನ್ನು ರಾಜ್ಯ ಸರಕಾರ ಕೈಗೊಂಡಿದೆ. ದಲಿತರನ್ನು ಒಡೆಯಬೇಕು ಎಂಬ ಉದ್ದೇಶದಿಂದ ರಾಜ್ಯ ಬಿಜೆಪಿ ಸರಕಾರ ನಾಟಕ ಮಾಡಿದೆ ಎಂದು ಟೀಕಿಸಿದರು.
ಲಂಬಾಣಿ, ಕೊರಚ, ಕೊರಮ, ಭೋವಿ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಹೊರತೆಗೆಯಲು ಬಿಜೆಪಿ ಹುನ್ನಾರು ಮಾಡಿದೆ. ಏಕೆಂದರೆ ಸಂವಿಧಾನದ ಅನುಚ್ಛೇದ ೩೪೧ (೨) ಉಲ್ಲೇಖ ಮಾಡಿದೆ.ಸಂವಿಧಾನದ ಅನುಚ್ಛೇದ ೧೭ ರಂತೆ ಈಗಾಗಲೇ ದೇಶದಾದ್ತ ಅಸ್ಪೃಶ್ಯತೆ ನಿಷಿದ್ಧವಾಗಿದ್ದರೂ ಸಹ ಬಿಜೆಪಿ ಸರಕಾರ ಸ್ಪೃಶ್ಯ, ಅಸ್ಪೃಶ್ಯ ಎಂಬ ಪರಿಕಲ್ಪನೆಯಲ್ಲಿ ಒಳವರ್ಗೀಕರಣ ಮಾಡಿ ಜಾತಿ ನಿಂದನೆ ಮಾಡಲಾಗಿದೆ. ಹೀಗಾಗಿ ಸಚಿವ ಸಂಪುಟದ ಎಲ್ಲರನ್ನೂ ಸಹ ಬಂಧಿಸಬೇಕು.
ಬಿಜೆಪಿಯಲ್ಲಿರುವ ನಮ್ಮ ಸಮಾಜದ ಜನಪ್ರತಿನಿಧಿಗಳು ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಬೇಕು. ಸರಕಾರದ ನಿರ್ಧಾರ ಸರಿ ಇದೆ ಎಂದು ನಮ್ಮ ಸಮುದಾಯದ ಸ್ವಾಗತಿಸಿದರೆ ನಾನು ವಿರೋಧಿಸುತ್ತೇನೆ ಮುಂದೆ ನಮ್ಮ ಸರಕಾರ ಬಂದರೆ ವರ್ಗೀಕರಣ ಶಿಪಾರಸ್ಸು ಹಿಂಪಡೆಯುವುದಾಗಿ ಹೇಳಿದರು. ಒಂದು ನಮ್ಮ ಸಮಾಜದ ಪರವಾಗಿ ಯಡಿಯೂರಪ್ಪ ಮಾತನಾಡಿದರೆ ಸ್ವಾಗತ. ಹಿರಿಯರಿದ್ದಾರೆ ತಮ್ಮ ಸರಕಾರಕ್ಕೆ ಹೇಳಿ ಹಿಂಪಡೆಯುವAತೆ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅವರೊಂದಿಗೆ ಬಾಲರಾಜ ನಾಯಕ. ವೆಂಕಟೇಶ ಇದ್ದ