ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.4: ತಾಲ್ಲೂಕಿನ ವೈ.ಹುಣಸೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗಜ್ಜಿಗಾನಹಳ್ಳಿ, ಸೀಗೆಹಳ್ಳಿ,ವೈ.ಹುಣಸೆನಹಳ್ಳಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ,ಮಾರಪ್ಪನಹಳ್ಳಿ, ವಾರ ಹುಣಸೇನಹಳ್ಳಿ ಹಾಗೂ ಬಸವನಪರ್ತಿ ಗ್ರಾಮಗಳಿಗೆ ಪಂಚರತ್ನ ಯೋಜನೆಯ ಬಗ್ಗೆ ಚುನಾವಣಾ ಪ್ರಚಾರ ಮಾಡಲು ಭೇಟಿ ನೀಡಿದ ಬಿ.ಎನ್ ರವಿಕುಮಾರ್ ರವರನ್ನು ಗ್ರಾಮಸ್ಥರು ಅದ್ದೂರಿಗೆ ಸ್ವಾಗತ ಮಾಡಿ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್, ಕರ್ನಾಟಕ ರಾಜ್ಯದಲ್ಲಿ ಕುಮಾರಣ್ಣ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಶಿಡ್ಲಘಟ್ಟದಲ್ಲಿ ಸಹ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರ ಅಧಿಕಾರ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ಸೌಲಭ್ಯ ಕಲ್ಪಸಲಾಗಿದೆ. ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಜೊತೆಗೆ ರೈತರ ಸಾಲವನ್ನು ಮನ್ನಾ ಮಾಡಿ ಅನುಕೂಲ ಕಲ್ಪಿಸಿದ್ದಾರೆ ಮತ್ತೊಮ್ಮೆ ಅವರಿಗೆ ಅಧಿಕಾರ ನೀಡಿದರೆ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಮತ್ತು ಯುವಕರ ಕಲ್ಯಾಣಕ್ಕಾಗಿ ಕುಮಾರಣ್ಣ ರವರು ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ. ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಉತ್ತಮ ಆರೋಗ್ಯಕ್ಕಾಗಿ ಸಾರ್ವಜನಿಕ ಆಸ್ಪತ್ರೆಗಳ ನಿರ್ಮಾಣ, ಸಮಾಜದಲ್ಲಿರುವ ಎಲ್ಲಾ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಸಲುವಾಗಿ, ಎಲ್ಕೆಜಿ ಯಿಂದ ದ್ವಿತೀಯ ಪಿಯುಸಿ ವರೆಗೆ ಶಾಲೆಗಳ ನಿರ್ಮಾಣ, ರೈತರನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳ ಅನುಷ್ಠಾನ ಜೊತೆಗೆ ನೆರೆಯ ತೆಲಂಗಣ ರಾಜ್ಯದಲ್ಲಿ ರೈತರಿಗೆ ಮುಂಗಾರಿನಲ್ಲಿ ಎಕರೆಗೆ 10 ಸಾವಿರ ನೆರವು ನೀಡುವ ಯೋಜನೆಯನ್ನು ಕರ್ನಾಟಕದಲ್ಲಿಯೂ ಸಹ ಜಾಲಗೊಆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಂಕ್ ಮುನಿಯಪ್ಪ ಕಳೆದ 19 ದಿನಗಳಿಂದ ಕ್ಷೇತ್ರಾದ್ಯಂತ ಚುನಾವಣಾ ಪ್ರಚಾರವನ್ನು ಆರಂಭಿಸಿ ಕುಮಾರಣ್ಣ ಜಾಲಗೊಳಿಸಿರುವ ಪಂಚರತ್ನ ಯೋಜನೆಗಳ ಕುರಿತು ಜನರಿಗೆ ಅಲವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಪ್ರತಿಯೊಂದು ಗ್ರಾಮದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಈ ಬಾರಿ ಬಿ. ಎನ್ ರವಿಕುಮಾರ್ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡುತ್ತಿದ್ದು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲುವು ನಿಶ್ಚಿತವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ ಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಮಳಮಾಚನಹಳ್ಳಿ ಎಂ.ಕೆ ರಾಜಶೇಖರ್,ಗ್ರಾಪಂ ಸದಸ್ಯ ಕೆ.ಎಂ.ರವಿಕುಮಾರ್, ಕೆ.ಎಂ. ಮುನಿ ನಂಜಪ್ಪ,ಶಿವಕುಮಾರ್,ಹುಣಸೇನ ಹಳ್ಳಿ ಬೂಸ ನಾರಾಯಣಸ್ವಾಮಿ, ಡೇಲ ಸತೀಶ್, ಮುಖಂಡರಾದ ಸೂಲಕುಂಟಹಳ್ಳಿ ರಘುನಾಥರೆಡ್ಡಿ, ತಾದೂರು ರಘು, ಕುಂದಲಗುರ್ಕಿ ಚಂದ್ರು,ಗಂಗಪ್ಪ, ಮೇಲೂರು ಗ್ರಾಪಂ ಅಧ್ಯಕ್ಷ ಆರ್.ಎ ಉಮೇಶ್, ಸಿ ಕೆ ಗಜೇಂದ್ರ ಬಾಬು,ಕೊತ್ತನೂರು ಲಕ್ಷ್ಮೀಪತಿ, ಕುಂದಲಗುರ್ಕಿ ಮುನಿರಾಜು,ನಿವೃತ್ತ ಬಿಲ್ ಕಲೆಕ್ಟರ್ ಗೋಪಾಲ್,ಮತ್ತಿತರರು ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು.