ಸುದ್ದಿಮೂಲ ವಾರ್ತೆ,
ಸಿರುಗುಪ್ಪ ಏ೦೫-ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದೆ ತಾಲೂಕಿನ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಒಟ್ಟು 16.60 ಲಕ್ಷ ರೂ ನಗದು 2 ಪಕ್ಷಗಳು ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆದು ಪಕ್ಷಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸಿರುಗುಪ್ಪ ವಿಧಾನಸಭಾ ಚುನಾವಣಾ ಅಧಿಕಾರಿ ಹೆಚ್ ಕೆ ಸತೀಶ್ ಅವರು ತಿಳಿಸಿದರು .
ನಗರದ ಚುನಾವಣಾ ಕಚೇರಿಯಲ್ಲಿ ಪತ್ರಿಕೆ ದೊಂದಿಗೆ ಮಾತನಾಡಿ ಮಾರ್ಚ್ 29 ರಿಂದ ಪೊಲೀಸ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಜಾಗೃತ ದಳಗಳು ತಾಲೂಕಿನಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ ಇಲ್ಲಿಯವರೆಗೆ ಇಬ್ರಾಹಿಂಪುರ್ ಚೆಕ್ ಪೋಸ್ಟ್ ದಲ್ಲಿ 5.35 ಲಕ್ಷ ನಗದು ಕೆ ಬೆಳಗಲ್ ಚೆಕ್ ಪೋಸ್ಟ್ ದಲ್ಲಿ 82 ಸಾವಿರ ಒತ್ತು ಮುರಣಿ ಚೆಕ್ ಪೋಸ್ಟ್ ದಲ್ಲಿ 15.8 ಲಕ್ಷ ರೂ ವಿವಿಧ ಕಡೆಗೆ ಸೇರಿದಂತೆ ನಗದು ಒಟ್ಟು 21.95 ಲಕ್ಷ ರೂ ಮೌಲ್ಯ ಜಪ್ತಿ ಮಾಡಿದೆ ಚುನಾವಣಾ ವೇಳಾಪಟ್ಟಿ ಘೋಷಣೆಗೂ ಮುನ್ನ 9.63 ಲಕ್ಷ ನಗದು 1.35 ಲಕ್ಷ ಬೆಲೆಯ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂಬ ವಿವರಣೆ ನೀಡಿದರು ಸಹಾಯಕ ಚುನಾವಣಾ ಅಧಿಕಾರಿ ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ , ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸೇರಿದಂತೆ ಇತರರು ಇದ್ದರು.