ಸುದ್ದಿಮೂಲ ವಾರ್ತೆ,
ಬೀದರ್ ಏ.೦೫ : ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಚಿಸಲಾದ , ಎಸ್ ಎಸ್ ಟಿ ತಂಡ, ಪೋಲಿಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಸಹಭಾಗಿತ್ವದಲ್ಲಿ ಏಪ್ರೀಲ್ 04 ರಿಂದ ಏಪ್ರಿಲ್ 5 ರ ವರೆಗೆ ಮಧ್ಯ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪೊಲೀಸ್ ಇಲಾಖೆಯು 10,875 ರೂ. ಮೌಲ್ಯದ 28.02 ಲೀ. ಮಧ್ಯ ವಶ ಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 21,408 ರೂ. ಮೌಲ್ಯದ 49.41 ಲೀ. ಮಧ್ಯ ಜಪ್ತಿ ಮಾಡಲಾಗಿದೆ.
ಎಸ್.ಎಸ್.ಟಿ ತಂಡದಿಂದ 8,65,000 ರೂ. ಮೌಲ್ಯದ ಇತರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೊತ್ತ 8,97,283 ರೂ.ಗಳಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.