ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಏ.5: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ದೇವನಹಳ್ಳಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎನ್. ಶ್ರೀನಿವಾಸಮೂರ್ತಿಯವರನ್ನು ದೇವನಹಳ್ಳಿ ಟಿ.ಸಿ ಕಛೇರಿಯಲ್ಲಿ ಬೀಳ್ಕೊಡಲಾಯಿತು.
ಈ ಸಮಯದಲ್ಲಿ ಸಂಚಾರಿ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿರುವ ಡಿ. ನಾರಾಯಣಸ್ವಾಮಿ ಮಾತನಾಡಿ, ಶ್ರೀನಿವಾಸಮೂರ್ತಿಯವರು ಸಜ್ಜನಿಕೆಯ ವ್ಯಕ್ತಿಯಾಗಿದ್ದು ಅನೇಕ ಆಯಾಮಗಳಲ್ಲಿ ಕೆಲಸ ನಿರ್ವಹಿಸಿ ಯಾವುದೇ ಕಪ್ಪಚುಕ್ಕೆ ಬಾರದಂತೆ ತಮ್ಮ ಕೆಲಸವನ್ನು ನಿರ್ವಹಿಸಿ ಸುಮಾರು 31ವರ್ಷ ಅವಿರತವಾಗಿ ಕೆ.ಎಸ್.ಆರ್.ಟಿ.ಸಿ ಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಮಾಳಿಗೇನಹಳ್ಳಿ ರಘುಪ್ರಸಾದ್ ಸೇರಿದಂತೆ ಅನೇಕರು ಅವರು ವಿಶ್ರಾಂತಿ ಜೀವನಕ್ಕೆ ಬೀಳ್ಕೊಟ್ಟರು.