ಸುದ್ದಿಮೂಲ ವಾರ್ತೆ ,
ಬಸವಕಲ್ಯಾಣ ಏ.೦೫ – ಲಂಚ ಪಡೆಯುವ ವೇಳೆ ಬಸವಕಲ್ಯಾಣ ತಾಲೂಕಿನ ಮಂಠಾಳ ಪಿಎಸ್ಐ ಶೀಲಾ ನ್ಯಾಮನ್, ಪೇದೆ ಪರಶುರಾಮರಡ್ಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮರಳು ಸಾಗಾಣಿಕೆ ಮಾಡಲು ಪ್ರತಿ ತಿಂಗಳು ಒಂದು ಲಾರಿಗೆ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟು ಮೂರು ಲಾರಿಗಳಿಗೆ 21 ಸಾವಿರ ರೂ. ಬೇಡಿಕೆ ಇಟ್ಟಿದ್ದಕ್ಕೆ ಕಲಬುರಗಿ ನಗರದ ಇರ್ಷಾದ್ ಪಟೇಲ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ. ಓಲೇಕಾರ್, ತನಿಖಾಧಿಕಾರಿಗಳಾದ ಬಾಬಾ ಸಾಹೇಬ್ ಪಾಟೀಲ್, ಪ್ರದೀಪ ಕೊಳ್ಳಾ ಸಿಬ್ಬಂದಿ ಠಾಣೆಯಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.