ಸುದ್ದಿಮೂಲ ವಾರ್ತೆ ,
ಬಳ್ಳಾರಿ ಏ೦೫ :ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಆತ್ಮ ಸ್ಥೈರ್ಯ, ನಿರ್ಭಯ ಮತ್ತು ನಿರ್ಭಿತಿಯಿಂದ ಮತ ಚಲಾಯಿಸಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಭದ್ರತೆಗಾಗಿ ನಗರದಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.
ನಗರದ ಕೋಟೆ ಪ್ರದೇಶದಲ್ಲಿನ ಸೆಂಟ್ ಜೋಸೇಫ್ ಕಾಲೇಜು ಮೈದಾನದಿಂದ ಆರಂಭವಾಗಿ ಕೌಲ್ ಬಜಾರ್ ರಸ್ತೆಯಿಂದ ಮೋತಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಯಲ್ ಸರ್ಕಲ್ ನಿಂದ ಬೆಂಗಳೂರು ರಸ್ತೆ ಮಾರ್ಗವಾಗಿ ಎಪಿಎಂಸಿ ಮಾರುಕಟ್ಟೆವರೆಗೆ ನಡೆಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜೀತ್ ಕುಮಾರ್ ಭಂಡಾರು ಅವರ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಟರಾಜ, ಐಟಿಬಿಟಿ ಸೆಕೆಂಡ್ ಇನ್ ಕಮಾಂಡೆಂಟ್ ಅಧೋಲಿ ಚೆಸ್ಸಿ, ಐಟಿಬಿಟಿ ಡೆಪ್ಯೂಟಿ ಕಮಾಂಡೆಂಟ್ ಪ್ರವೀಣ್ ಸಿಂಗ್, ಅಸಿಸ್ಟೆಂಟ್ ಕಮಾಂಡೆಂಟ್ ಡಾ.ಪ್ರಕಾಶ್ ಕುಮಾರ, ಅಭಿಮನ್ಯು ಕುಮಾರ್, ಐಟಿಬಿಟಿ ಅಸಿಸ್ಟೆಂಟ್ ಕಮಾಂಡೆಂಟ್ ಗಜೇಂದ್ರ ಪಾಲ್ ಸಿಂಗ್ ಒಳಗೊಂಡಂತೆ ಜಿಲ್ಲೆಯ ನಾಲ್ಕು ಡಿಎಎಸ್ ಪಿ, 10 ಜನ ಇನ್ಸ್ಪೆಕ್ಟರ್, 25 ಜನ ಪಿಎಸ್ಐ, 200 ಜನ ಸಿಐಪಿಎಫ್ ಪೊಲೀಸ್ ಸಿಬ್ಬಂದಿ, ಯವರು 5 ಡಿಎಅರ್ ಪ್ಲೋಟೋನುಗಳು, 200 ಜನ ನಾಗರಿಕ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಂತೆ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಐಜಿ ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸೇರಿದಂತೆ ಇತರರು ಭಾಗವಹಿಸಿದ್ದರು.