ಸುದ್ದಿ ಮೂಲ ವಾರ್ತೆ
ಮೈಸೂರು.ಏ,09: ನ್ನೆನ್ನೆ ಅಷ್ಟೇ ಮೈಸೂರುಗೆ ಆಗಮಿಸಿರುವ ನರೇಂದ್ರ ಮೋದಿ ಇಂದು ಬಂಡೀಪುರದ ಕಾಡಿನಲ್ಲಿ ಸಫಾರಿ ಕೈಗೊಳ್ಳಲಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ವನ್ಯಜೀವ ಸಫಾರಿ ನಡೆಸಲಿದ್ದಾರೆ.
ಇಂದು ಬೆಳಗ್ಗೆ 7.30 ರ ಸುಮಾರಿಗೆ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮೀಸಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿರುವ ಪಿ.ಎಂ ಬಳಿಕ ಎಸ್.ಪಿಜಿ ಭದ್ರತೆಯೊಂದಿಗೆ ಸಫಾರಿದೊಂದಿಗೆ ಕಾಡಲ್ಲಿ ಸುತ್ತಾಡಲಿದ್ದಾರೆ.
ಅಂಚೆ ಚೀಟಿ ಬಿಡುಗಡೆ ಬಂಡೀಪುರದಲ್ಲಿ ಹಳೇ ಸಫಾರಿ ಕೇಂದ್ರದ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಪುಷ್ಟನಮನ ಸಲ್ಲಿಸುವರು ಎಂದು ತಿಳಿದು ಬಂದಿದೆ.
ಬೋಳಗುಡ್ಡ ಎತ್ತರದ ಪ್ರದೇಶಕ್ಕೆ ಏರಿ ಇಡೀ ಅರಣ್ಯ ಪ್ರದೇಶವನ್ನು ಕಣ್ಣತುಂಬಿಕೊಳಲ್ಲಿರುವ ಮೋದಿ ಕಳ್ಳಬೇಟಿ ತಡೆ ಶಿಬಿರಕ್ಕೆ ಬೇಟಿ ಕೊಡುವ ಸಾಧ್ಯತೆ ಇದೆ.
ಹುಲಿ ಗಣತಿ ಅಂಕಿ ಅಂಶ ಬಿಡುಗಡೆ ಮಾಡಲಿರುವ ಮೋದಿ ಈ ಬಾರಿ ಕರ್ನಾಟಕವೇ ನಂ,1 ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ್ಯಾಕಿಂಗ್ ನಲ್ಲಿ ಬಂಡೀಪುರ ನಂ 1 ಬರುವ ನೀರಿಕ್ಷೆ ಇದೆ.
ವಾಹನಗಳ ಚಲನೆಯನ್ನು ಬಂದ್ ಮಾಡಲಾಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸ್ ರು ಬಾರೀ ಬಂದೋಬಸ್ತ್ ನಿರ್ಮಿಸಿದ್ದಾರೆ.
ಮೋದಿ ಸಫಾರಿಯ ಸಂದರ್ಭದಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಅರಣ್ಯಾಧಿಕಾರಿ ಭಾಗವಹಿಸಲಿದ್ದಾರೆ.