ಸುದ್ದಿಮೂಲ ವಾರ್ತೆ
ಸಿರವಾರ: ಏ.೯ ವಿಧಾನ ಸಭೆಯ ಚುನಾವಣೆ ಜೆಡಿಎಸ್ ಪಕ್ಷದ ಮಾನ್ವಿ ಕ್ಷೇತ್ರದ ಅಭ್ಯಾರ್ಥಿಯಾದ ರಾಜಾ ವೆಂಕಟಪ್ಪ ನಾಯಕ ತಾಲೂಕಿನ ತುಂಬಾ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ರವಿವಾರ ತಾಲ್ಲೂಕಿನ ಜಕ್ಕಲದಿನ್ನಿ, ಅತ್ತನೂರು, ನೀಲಗಲ್ ಕ್ಯಾಂಪ್, ಅತ್ತನೂರು ಕ್ಯಾಂಪ್,ಗಣದಿನ್ನಿ,ಶಾಖಾಪೂರ, ಸಿಂಗಡಿದಿನ್ನಿ ಗ್ರಾಮಗಳಲ್ಲಿ ಪಂಚರತ್ನ ಯೋಜನೆಯ ಕರಪತ್ರ ಹಾಗೂ ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದೆ ಇಟ್ಟುಕೊಂಡು ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ ಬಲ್ಲಟಿಗಿ, ಜಂಭುನಾಥ ಯಾದವ, ರಾಜಾ ಆದರ್ಶ ನಾಯಕ, ಶರಣಪ್ಪಗೌಡ,ಪಿ ರವಿಕುಮಾರ, ಬಸನಗೌಡ, ಮೌನೇಶಗೌಡ, ಗೋಪಾಲ ನಾಯಕ ಹರವಿ,ಲಕ್ಷ್ಮಣ ಯಾದವ,ಎಸ್ ಯಕೋಬ,ಬಸವರಾಜ ಸ್ವಾಮಿ, ಇಬ್ರಾಹಿಂ,ಜಂಶೀರ್ ಅಲಿ,ಅಲಂ ಸಾಬ್,ಸಿಕಿಂದರ್ ದೊಡ್ಡ ಮನಿ, ಹನುಮಂತ್ರಾಯ್ಯ ನಾಯಕ,ವೀರಭದ್ರಯ್ಯ ಸ್ವಾಮಿ,ಮಂಜುನಾಥ ದೊರೆ,ಈರಣ್ಣ ಜಗ್ಲಿ,ವಿರುಪಾಕ್ಷಿ, ಪಂಪಾಪತಿ ನಾಯಕ ಅತ್ತನೂರು, ಮಾರಪ್ಪ ಕ್ಯಾಂಡೇಟ್, ವಿರುಪಾಣ್ಣ ಮಡಿವಾಳ,ಸತ್ಯ ಬಾಬು,ಸೂರಿ ಬಾಬು,ಅಮರೇಶ ನಾಯಕ,ಸತ್ಯ ಬಾಬು ರೆಡ್ಡಿ,ವಸ್ತು ರಾಮಣ್ಣ,ಡಾ.ವಾಸು,ಬ್ರಹ್ಮಜೀ ಪಕ್ಷದ ಮುಂಖಡರು ಕಾರ್ಯಕರ್ತರು ಇದ್ದರು.