ರಾಯಚೂರು,ಏ.09(ಕ.ವಾ):- ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದಲ್ಲಿ ಭಾನುವಾರ ಅರೆಸೇನಾ ಪಡೆ, ಪೊಲೀಸ್ ಪಡೆಯಿಂದ ನಗರದ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪೊಲೀಸ್ ಉಪ ಮಹಾನಿರೀಕ್ಷ(ಡಿ.ಐ.ಜಿ) ಬಿ.ಎಸ್ ಲೊಕೇಶ ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಪಥ ಸಂಚಲನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ರಾಯಚೂರು ನಗರ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳು ಹಾಗೂ ಅರೆಸೇನಾ ಪಡೆಯ ಸೈನಿಕರು ಪತರಸಂಚಲನೆ ಮೂಲಕ ಜನರಲ್ಲಿ ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು. ಜೊತೆಗೆ ಯಾವುದೇ ಭೀತಿಯಿಲ್ಲದೇ ಮತದಾನ ಮಾಡಬೇಕು ಸಾರ್ವಜನಿಕರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರಲಾಯಿತು.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ನಿಂದ ಆರಂಭವಾಗಿ ಜಾಕಿರ್ ಹುಸೇನ್ ಸರ್ಕಲ್-ಸೂಪರ್ ಮಾರ್ಕೆಟ್- ತೀನ್ ಕಂದಿಲ್- ಸರಾಫ ಬಜಾರ್- ನೇತಾಜಿ ಸರ್ಕಲ್-ಪಟೇಲ್ ಸರ್ಕಲ್ ಬಸವನ ಭಾವಿ ಸರ್ಕಲ್-ಗಂಜ್ ಸರ್ಕಲ್ ಮಾರ್ಗವಾಗಿ ಸಂಚರಿಸಿ ಗ್ರಾಮಾಂತರ ಠಾಣೆ ಬಳಿ ಮುಕ್ತಾಯಗೊಂಡಿತು.
ಮತದಾನದ ವೇಳೆ ಯಾವುದೇ ಅಹಿತಕರ ಚಟುವಟಿಕೆಗಳು ಜರುಗದಂತೆ ಹಾಗೂ ಶಾಂತಿಯುತವಾಗಿ ಚುನಾವಣೆ ಪ್ರಕ್ರಿಯೇ ನಡೆಯಬೇಕೆಂಬ ನಿಟ್ಟಿನಲ್ಲಿ ಎಲ್ಲ ರೀತಿಯ ಭದ್ರತೆಗಳ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ. ಎಂಬ ಸಂದೇಶವನ್ನು ಜನರಿಗೆ ಪತಸಂಚಲನ ಮೂಲಕ ಸಾರಲಾಯಿತು.