ಸುದ್ದಿಮೂಲ ವಾರ್ತೆ
ಹೊಸಕೋಟೆ, ಏ.10: ತಾಲೂಕಿನ ಮತದಾರರು ನನಗೆ ಕಳೆದ ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದೀರಿ. ಅದರ ಪ್ರತಿಫಲವಾಗಿ ಕೆಲಸ ಮಾಡಿದ್ದೇನೆ. ಮತದಾರರ ವಿಶ್ವಾಸಕ್ಕೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಆಂಜನೇಯ ಮುತ್ಯಾಲಮ್ಮ ದೇವಾಲಯಗಳಲ್ಲಿ ಪೂಜಿ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಪಕ್ಷ ಬದಲಾವಣೆ ಮಾಡುವುದು ಸಹಜ ನಮ್ಮನ್ನು ಬಿಟ್ಟು ಹೋದವರ ಬಗ್ಗೆ ನಾವು ಚಿಂತೆ ಮಾಡಬಾರದು ಎಂದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕರೋನಾ ಸಮಯದಲ್ಲಿ ನಿಗ್ರಹಿಸಿದ ಕಾರ್ಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕು. ನಮ್ಮ ಬೆನ್ನೆಲುಬಿಗೆ ನಿಂತ ಸಾಕಷ್ಟು ನಾಯಕರು ನಮ್ಮೊಂದಿಗೆ ಇದ್ದು ಮತಯಾಚನೆ ಮಾಡುತ್ತಿದ್ದಾರೆ. 2023ನೇ ವಿಧಾನಸಭಾ ಚುನಾವಣೆ ನಮಗೆ ಒಂದು ರೀತಿ ಅಗ್ನಿಪರೀಕ್ಷೆಯಾಗಿದೆ.
ಮತದಾರರು ಈ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಆಶೀರ್ವಾದ ಮಾಡಬೇಕು. ನನ್ನನ್ನು ಈ ಬಾರಿ ಕೈ ಹಿಡಿದು ಮತ ಹಾಕಿ ಆಶೀರ್ವದಿಸಿ ಪ್ರತಿನಿತ್ಯವೂ ನಿಮ್ಮ ಸದಾ ಸೇವೆಯಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ ಎಂದರು. ಇತ್ತೀಚೆಗೆ ನಡೆದಂತಹ ರಾಜಕೀಯ ಬೆಳವಣಿಗೆಗಳ ಬಗ್ಗೆ ದೊಡ್ಡ ಹುಲ್ಲೂರು ಗ್ರಾಮದಲ್ಲಿ ದಶಕಗಳ ಕಾಲ ನಮ್ಮ ಜೊತೆ ರಾಜಕೀಯವಾಗಿ ಕೆಲಸ ಮಾಡಿದ ಸಿ ಮಂಜುನಾಥ್ ಬಿಜೆಪಿ ಪಕ್ಷಕ್ಕೆ ಹೋಗಿದ್ದಾರೆ. ಅವರ ವೈಯಕ್ತಿಕ ವಿಚಾರದಲ್ಲಿ ಅವರ ಪುತ್ರನಾದ ಕಿರಣ್ ಹೆಸರನ್ನ ಎಫ್ಐಆರ್ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮಾಡಿದ ಆರೋಪ ಸತ್ಯಕ್ಕೆ ದೂರವಾದದ್ದು ಅವರ ಗ್ರಾಮಕ್ಕೆ ಬಂದು ಎಫ್ ಐ ಆರ್ ಪ್ರತಿಯನ್ನು ಗ್ರಾಮ ದೇವತೆಯಾದ ಮುತ್ಯಾಲಮ್ಮ ದೇವಿಯ ಪಾದದ ಮುಂದೆ ಇಟ್ಟು ತಿಳಿಸುತ್ತಿದ್ದೇನೆ ಅದರಲ್ಲಿ ನನ್ನದು ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ ಎನ್ ಟಿ ಮಂಜುನಾಥ್ ಮಾತನಾಡಿ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಹಿಂದಿನಿಂದಲೂ ಬಚ್ಚೇಗೌಡರಿಗೆ ಬಹುಮತ ಕೊಟ್ಟು ಕೆಲಸ ಮಾಡಿದ್ದೀರಿ. ಈಗ ಅವರ ಮಗ ಶಾಸಕ ಶರತ್ ಬಚ್ಚೇಗೌಡರ ಪರವಾಗಿ ಮತದಾನ ಮಾಡುವ ಮೂಲಕ ಬಹುಮತ ನೀಡಿ ಅವರನ್ನ ಹೆಚ್ಚಿನ ಮತಗಳಿಂದ ನಾವೆಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಬೇಕು. ಮುಂದಿನ ಐದು ವರ್ಷಗಳಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ಎನ್ಟಿ ಮಂಜುನಾಥ್, ಕೆಪಿಸಿಸಿ ಕಾರ್ಯದರ್ಶಿ ಬಿ ಗೋಪಾಲ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ ಕೃಷ್ಣಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಚ್ಚೇಗೌಡ, ಮುಖಂಡರಾದ ಬಿವಿ ಬೈರೇಗೌಡ, ಡಿಎಂ ಮುನಿರಾಜ್, ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.