ಸುದ್ದಿಮೂಲ ವಾರ್ತೆ
ಕೊಪ್ಪಳ ಏ ೧೦: ಕಳೆದ ಹತ್ತು ವರ್ಷದಿಂದ ಶಾಸಕರಾಗಿರುವ ಕೊಪ್ಪಳ ಶಾಸಕರಿಗೆ ಅಲ್ಲಲ್ಲಿ ಮತದಾರರು ಅಸಮಾದಾನದಿಂದ ತರಾಟೆಗೆ ತೆಗೆದುಕೊಳ್ಳುತ್ತಿರುವ ಘಟನೆಗಳು ವರದಿಯಾಗಿವೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ ಶಾಸಕರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಕೊಪ್ಪಳ ಶಾಸಕ ಕೆ ರಾಘವೇಂದ್ರರನ್ನು ಹಿರೇಬಗನಾಳ ಗ್ರಾಮಸ್ಥರು ಪ್ರಶ್ನಿಸಿ ತರಾಟಗೆ ತೆಗೆದುಕೊಂಡರು. ಹಿರೇಬಗನಾಳ, ಅಲ್ಲಾನಗರ, ಕಾಸನಕಂಡಿ,ಹಾಲವರ್ತಿ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿ ತಿರುಗಾಡಲು ಹರಸಾಹಸ ಪಡಬೇಕಾಗಿದೆ. ನೀವೇನು ಮಾಡಿದಿರಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಹಿರೇಬಗನಾಳಕ್ಕೆ ಪ್ರಚಾರಕ್ಕೆ ಹೋಗಿದ್ದಾಗ ಗ್ರಾಮಸ್ಥರು ಶಾಸಕರನ್ನು ಪ್ರಶ್ನಿಸಿದರು. ಗ್ರಾಮಕ್ಕೆ ಆಗಮಿಸಿದ ಶಾಸಕರನ್ನು ಕೆಆರ್ ಎಸ್ ಪಕ್ಷದ ಕಾರ್ಯಕರ್ತರಿಂದ ಮೊದಲು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಲವು ಯುವಕರು ಧ್ವನಿಗೂಡಿಸಿದರು, ಇದರಿಂದ ಇರಿಸುಮುರಿಸಿಗೆ ಒಳಗಾದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅಲ್ಲಿಂದ ಹೊರಟು ಹೋದರು.