ಸುದ್ದಿಮೂಲವಾರ್ತೆ
ಗಂಗಾವತಿ,ಏ.೧೦- ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನಸಭೆ ಕ್ಷೇತ್ರದ ಇರಕಲಗಡ್ ಹೋಬಳಿ ಹಾಸಗಲ್ ಗ್ರಾಮ ಪಂಚಾಯಿತಿಯ ವಿವಿಧ ಪಕ್ಷ ಬೆಂಬಲಿತ ೧೧ ಸದಸ್ಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನರೆಡ್ಡಿ ಅವರ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಮಾತನಾಡಿ, ಗ್ರಾ.ಪಂ. ಸದಸ್ಯರ, ಗ್ರಾಮದ ಹಿರಿಯ ಕಿರಿಯ ಹಾಗೂ ಜನ ಸಾಮಾನ್ಯರ ಮತ್ತು ಪಕ್ಷದ ಮುಖಂಡರ ಸಹಕಾರದಿಂದ ಪಕ್ಷ ಹಾಗೂ ಧರ್ಮ, ಜಾತಿ ಬೇದ ಮಾಡದೇ ಹಾಸಗಲ್ ಗ್ರಾಮ ಪಂಚಾಯಿತಿ ಎಲ್ಲಾ ಗ್ರಾಮಗಳಿಗೂ ಅವಶ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಲಾಗುವುದು ಎಂದರು.
ಜಿ. ಪಂ. ಮಾಜಿ ಸದಸ್ಯ ಮಲ್ಲೇಶಪ್ಪ ಗುಮಗೇರಿ, ಪಕ್ಷದ ಜಿಲ್ಲಾ ವಕ್ತಾರ ಸಂಗಮೇಶ ಬಾದವಡಗಿ ಮರೀಬಸಪ್ಪ ಹಾಸಗಲ್, ಸುಮಂಗಲ ಮಲ್ಲೆಶಪ್ಪ ಗುಮಗೇರಿ, ಕರಿಯಪ್ಪ ಮ್ಯಾಡನೆರಿ, ಎಂಕಪ್ಪ ದೇಸಾಯಿ, ನಿಂಗಪ್ಪ ಪೂಜಾರ್ ನೀಲಮ್ಮ ವಿರುಪಣ್ಣ ಗುಲ್ಕಿ, ಹನುಮಂತಮ್ಮ ನಿಂಗಪ್ಪ ಹುನಸಿಹಾಳ್, ಹನುಮಂತಪ್ಪ ತಳವಾರ್, ಮೌನೇಶಮ್ಮ ಹನುಮಂತಪ್ಪ ಹರಿಜನ್, ಸುಮಂಗಲವ್ವ ಶಿವಾನಂದ್ ಹರಿಜನ್, ಸೀತಾ ಕೃಷ್ಣ ವಾತಾಪರ್ವಿ ಇತರರಿದ್ದರು.
ಜನಾರ್ಧನರೆಡ್ಡಿ ಪಕ್ಷ ಸ್ಥಾಪಿಸಿ ಮುಂದಿನ ಚುನಾವಣೆಯಲ್ಲಿ ಸದರಿ ಪಕ್ಷದಿಂದ ತಾವೇ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದ ನಂತರ ಈವರೆಗೆ ಗಂಗಾವತಿ ವಿಧಾ ಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಬೆಣಕಲ್ ಮತ್ತು ಆನೆಗುಂದಿ ಗ್ರಾ.ಪಂ. ಬಹುತೇಕ ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಈಗ ಹಾಸಗಲ್ ಗ್ರಾ.ಪಂ. ಸದಸ್ಯರನ್ನು ಸೇರಿಸಿಕೊಂಡಿದ್ದಾರೆ. ಅದರಂತೆ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ತಾ.ಪಂ. ಮತ್ತು ಜಿ.ಪಂ. ಮಾಜಿ ಸದಸ್ಯರುಗಳನ್ನು ಸೇರಿಸಿಕೊಂಡು ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸಂಘಟಿಸುತ್ತಿದ್ದಾರೆ.