ಸುದ್ದಿಮೂಲ ವಾರ್ತೆ
ಕೋಲಾರ, ಏ.10: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ, ರೈತ ಮಕ್ಕಳನ್ನು ಮದುವೆ ಆದವರಿಗೆ 2 ಲಕ್ಷ ರೂ ಅನುದಾನ ನೀಡುವಂತೆ ಎಂದು ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಶಿನಿಗೇನಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕುಮಾರಸ್ವಾಮಿ ಮಾತನಾಡಿದರು.
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಅಳಲು ಇದೆ. ಆದ್ದರಿಂದ ಇದನ್ನು ಹೋಗಲಾಡಿಸಲು ರೈತ ಹುಡುಗರನ್ನು ಮದುವೆಯಾದವರಿಗೆ 2 ಲಕ್ಷ ರೂ. ನೀಡಲಾಗುವುದು. ಇದಲ್ಲದೆ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮತ್ತು ಪ್ರತಿ ಗ್ರಾಮಕ್ಕೆ ಶುದ್ಧೀಕರಿಸಿದ ನೀರು ಸರಬರಾಜು ಮಾಡುವ ಶಪಥ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಗೊಂದಲ ಸರಿಪಡಿಸುತ್ತೇವೆ. ಮುಸ್ಲಿಮರ ಮೀಸಲಾತಿಯನ್ನೂ ಕೂಡ ಸರಿಪಡಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.