ಬಿಜೆಪಿಯಲ್ಲಿ ಅಭ್ಯರ್ಥಿಗಾಗಿ ಆಂತರಿಕ ಕಲಹ!
ಇಬ್ಬರ ಜಗಳದಲ್ಲಿ ಮೂರನೇವನಿಗೆ ಲಾಭ ಖಚಿತ!
ಜೇವರ್ಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಗಳಲ್ಲಿ ಆಂತರಿಕ ಗುದ್ದಾಟ .
ಬಿಜೆಪಿ ಪಕ್ಷದಲ್ಲಿ ಜೇವರ್ಗಿ ಮಂಡಲದ ವತಿಯಿಂದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಅಭ್ಯರ್ಥಿಗಳ ಹೆಸರನ್ನು ಕಳಿಸಲಾಗಿತ್ತು. ಆದರೆ ಪಕ್ಷದ ವರಿಷ್ಠರು ಆ ಹೆಸರುಗಳನ್ನು ತಿರಸ್ಕರಿಸಿ ಹಿರಿಯ ಪಕ್ಷದ ಕಾರ್ಯಕರ್ತರು ಹೆಸರನ್ನು ಕಳಿಸುವಂತೆ ಸೂಚನೆ ನೀಡಿದ್ದಾರೆ. ಪಕ್ಷದ ಆಂತರಿಕ ದಿಕ್ಕಟದಲ್ಲಿ ಮೂರನೆಯವನಿಗೆ ಲಾಭವಾಗುವುದಂತೂ ಖಚಿತ. ಒಂದು ಕಡೆ ಶಿವರಾಜ್ ಪಾಟೀಲ ಒಂದು ಕಡೆ ನಾನು ಜೇವರ್ಗಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಇನ್ನೊಂದು ಕಡೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನಾನು ಕ್ಷೇತ್ರದ ಆಕಾಂಕ್ಷಿ ಇದ್ದೀನಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಬ್ಬರ ಹಗ್ಗ ಜಗ್ಗಾಟದಲ್ಲಿ ಬಿಜೆಪಿ ಪಕ್ಷ ಯಾರಿಗೆ ಮಣಿಯಾಗುತ್ತಾ ನೋಡಬೇಕಾಗಿದೆ.
ಭಾರತೀಯ ಜನತಾ ಪಾರ್ಟಿ ಮೂಲ ಬಿಜೆಪಿಗರನ್ನು ಜೀವರ್ಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತದೆಯೋ ಅಥವಾ ವಲಸಿ ಬಂದ ಕಾರ್ಯಕರ್ತರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡುತ್ತದೆ ಅನ್ನುವುದು ಕಾದುನೋಡಬೇಕಾಗಿದೆ. ಒಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಬಿಜೆಪಿ ಮಂಡಲ ಜೇವರ್ಗಿಯಲ್ಲಿ ಆಂತರಿಕ ಈ ಗುದ್ದಾಟದಲ್ಲಿ ಮೂರನೇವನಿಗೆ ಲಾಭ ಆಗುವುದಂತೂ ಖಚಿತ.
ಕಲಬುರ್ಗಿಯಲ್ಲಿ ನಡೆದ ಎಂಎಲ್ಸಿ ನಮೋಸಿಯವರ ಮನೆಯಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಮಾತಿನ ಚಕ್ಕಮುಕಿ ನಡೆದಿತ್ತು.
ಭಾರತೀಯ ಜನತಾ ಪಾರ್ಟಿ ಜೇವರ್ಗಿ ಮಂಡಲದಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಜಿಲ್ಲಾ ಕೋರ್ ಕಮಿಟಿಯಲ್ಲಿ ಎಲ್ಲಾ ಲಿಂಗಾಯಿತರೇ ಸ್ಥಾನವನ್ನು ಪಡೆದಿದ್ದಾರೆ. ಹಿಂದುಳಿದ ವರ್ಗದವರಿಗೆ ಯಾವುದೇ ಸ್ಥಾನಮಾನಗಳು ಇಲ್ಲ. ಕೇವಲ ಚುನಾವಣೆ ಬಂದಾಗ ಮತ ಪಡೆದುಕೊಂಡು ಆಯ್ಕೆಯಾಗಿ ಅಧಿಕಾರ ಚಲಾಯಿಸುವುದಕಷ್ಟೇ ಹಿಂದುಳಿದ ವರ್ಗಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಬಿಜೆಪಿ ಪಕ್ಷದ ಇಬ್ಬರು ಹಿರಿಯ ನಾಯಕರು ಮಾರಮಾರಿ ಕಷ್ಟ ಬಂದಾಗ ಹಿರಿಯರು ನೆನಪಾಗುತ್ತಾರೆ ಸುಖದ ಸುಪ್ಪತ್ತಿಗೆ ಇಲ್ಲಿದ್ದಾಗ ಯಾವ ಹಿರಿಯರು ಕಣ್ಣಿಗೆ ಕಾಣಿಸುವುದಿಲ್ಲ ಇದು ನಿಮ್ಮ ಹಣೆಬರ ಎಂದ ಪಕ್ಷದ ಹಿರಿಯ ನಾಯಕರು.
2023 ರ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಬೇಕಾಗಿತ್ತು ಈ ಸಮಯದಲ್ಲಿ ಮೇಲ್ವರ್ಗದ ನಾಯಕರು ಅವರನ್ನು ರಾಜಕೀಯದಿಂದ ದೂರು ಇಟ್ಟಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಒಟ್ಟಿನಲ್ಲಿ ಜೇವರ್ಗಿಯ ಮತಬಾಂಧವರು ಮಾತನಾಡಿಕೊಳ್ಳುತ್ತಿದ್ದಾರೆ ಬಿಜೆಪಿ ಪಕ್ಷದ ಆಂತರಿಕ ಕಲಹಗಳಲ್ಲಿ ಮೂರನೆಯವನಿಗೆ ಲಾಭವಾಗುವುದಂತೂ ಸತ್ಯ.