ಒಗ್ಗಟ್ಟಿನಿಂದ ಚುನಾವಣೆ ಮಾಡಿ : ಶಶೀಲ್ ನಮೋಸಿ.
ನಮ್ಮ ಆಂತರಿಕ ಬಿನ್ನಮತವನ್ನು ಮರೆತು ಪಕ್ಷದ ಏಳಿಗೆಗೆ ನಾವೆಲ್ಲರು ಶ್ರಮಿಸುತ್ತೆವೆ ಎಂದು ಎಲ್ಲರು ಕೈ ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು
ಜೇವರ್ಗಿ ೧೧ : ಜೇವರ್ಗಿಯ ಬಿಜೆಪಿ ಮಂಡಲ ಯಾವತ್ತಿಗು ಒಡೆಯಬಾರದು. ಇಲ್ಲಿ ಒಗ್ಗಟ್ಟಿದೆ, ಇರುತ್ತದೆ ಒಗ್ಗಟ್ಟಿನಿಂದ ಚುನಾವಣೆಯನ್ನು ಮಾಡೋಣ ಎಂದು ಶಶೀಲ್ ನಮೋಸಿ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ಬಿಜೆಪಿ ಮಂಡಲ ವತಿಯಿಂದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಾರ್ಯಕರ್ತರ ಸಭೆ ಜರುಗಿತು.
ಸಭೆಯನ್ನುದ್ದೆಶಿಸಿ ಶಶೀಲ್ ನಮೋಸಿ ಮಾತನಾಡಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಗೆಲ್ಲಿಸುವುದು ಕಾರ್ಯಕರ್ತರ ಗುರಿಯಾಗಬೇಕು. ಪಕ್ಷ ಗೆದ್ದರೆ ಮಾತ್ರ ವ್ಯಕ್ತಿ ಗೆಲ್ಲುತ್ತಾನೆ ವ್ಯಕ್ತಿ ಗೆದ್ದರೆ ಪಕ್ಷ ಗೆಲ್ಲುವುದಿಲ್ಲ. ವ್ಯಕ್ತಿ ಯಾರೇ ಆಗಿರಲಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ಮಾಡಿ. ನಮ್ಮ ಜೇವರ್ಗಿ ಮಂಡಲದವರು ಪಕ್ಷದ ನಿರ್ಣಯಕ್ಕೆ ಬದ್ದರಾಗಿ ಕಾರ್ಯನಿರ್ವಹಿಸಬೇಕು.
ಜೇವರ್ಗಿಯ ಬಿಜೆಪಿ ಮಂಡಲ ಯಾವತ್ತಿಗು ಒಡೆಯಬಾರದು. ಇಲ್ಲಿ ಒಗ್ಗಟ್ಟಿದೆ, ಇರುತ್ತದೆ ವiತ್ತು ಒಗ್ಗಟ್ಟಿನಿಂದ ಚುನಾವಣೆಯನ್ನು ಮಾಡೋಣ. ನಮ್ಮ ವಯಕ್ತಿಕ ಹಿತಕಿಂತ ಪಕ್ಷದ ಹಿತ ಮುಖ್ಯ ಎಂದು ನಾವೆಲ್ಲರು ಪಕ್ಷವನ್ನು ಬಲಪಡಿಸಬೇಕು. ಪಕ್ಷವಿದ್ದರೆ ಮಾತ್ರ ನಾವು, ಆದ್ದರಿಂದ ಇಂದಿನಿoದಲೆ ಪಕ್ಷದ ಏಳಿಗೆಗೆ ಶ್ರಮಿಸಿ ಎಂದು ಶಶೀಲ್ ನಮೋಸಿ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ರಮೇಶ ಬಾಬು ವಕೀಲ್, ಧರ್ಮಣ್ಣ ದೊಡ್ಮನಿ, ಶಿವರಾಜ್ ಪಾಟೀಲ್ ರದ್ದೇವಡಗಿ, ದೊಡ್ಡಪ್ಪಗೌಡ ಪಾಟೀಲ್ ನರಿಬೊಳ, ಮಲ್ಲಿನಾಥ್ ಗೌಡ ಯಲಗೋಡ, ಶೋಭಾ ಬಾಣಿ, ರೇವಣಸಿದ್ದಪ್ಪ ಸಂಕಲಿ, ಹಳ್ಳೆಪ್ಪ ಆಚಾರ್ಯ ಜೋಶಿ, ಭೀಮರಾಯ ಗುಜುಗೊಂಡ, ಸಾಯಬಣ್ಣ ದೊಡ್ಡಮನಿ, ಗಂಗುಬಾಯಿ ಜಟ್ಟಿಂಗರಾಯ ಮಂದ್ರವಾಡ, ಸಂಗಣಗೌಡ ಪಾಟೀಲ್ ರದ್ದೆವಾಡಗಿ ಪಕ್ಷದ ಮುಖಂಡರು ಮತ್ತು ಹಿರಿಯರು ಸೇರಿದಂತೆ ಈ ಸಭೆಯಲ್ಲಿ ಉಪಸ್ಥಿತರಿದ್ದರು.