ಸುದ್ದಿಮೂಲವಾರ್ತೆ
ಮುದಗಲ್ ಏ,11 : ಬಸವ ಜಯಂತಿ ಪ್ರಯುಕ್ತ ಇಂದಿನಿಂದ ಸ್ಥಳೀಯ ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನದಲ್ಲಿ ಶರಣರ ಜೀವನ ದರ್ಶನ ಪ್ರವಚನ ಪ್ರಾರಂಭವಾಗುತ್ತದೆ ಎಂದು ಸಿದ್ಧಯ್ಯಸ್ವಾಮೀ ಸಾಲಿಮಠ ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಏ, ೧೨ನೇ ತಾರೀಖಿನಿಂದ ಪ್ರತಿನಿತ್ಯ ಸಾಯಂಕಾಲ ತಿಮ್ಮಾಪೂರು ಕಲ್ಯಾಣಾಶ್ರಮದ ಪೂಜ್ಯರಾದ ಮಹಾಂತಸ್ವಾಮೀಜಿ ಸಾಲಿಮಠ ಅವರಿಂದ ಶರಣರ ಜೀವನ ದರ್ಶನ ಎಂಬ ಪ್ರವಚನ ಏ,22-04-2023ರವರೆಗೆ ನಡೆಯುವುದು. ಏ,23 ಬಸವ ಜಯಂತಿ ದಿನದಂದು ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ. ಮಹಿಳೆಯರು ಹೊತ್ತ ಕುಂಭ-ಕಳಸ, ಉತ್ಸವ ಮೂರ್ತಿ, ಬಸವೇಶ್ವರ ಭಾವಚಿತ್ರ ಮೆರವಣಿಗೆ ವಿವಿಧ ಕಲಾತಂಡ ಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಜರುಗುವುದು. ಸಾಯಂಕಾಲ ನೂತನವಾಗಿ ನಿರ್ಮಿಸಿರುವ ಮಹಾರಥೋತ್ಸವ ನಡೆಯುತ್ತದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು ಕೋರಿದರು.
ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ, ನಂದವಾಡಗಿ- ಆಳಂದ ಮಹಾಂತೇಶ್ವರಮಠದ ಮಹಾಂತಲಿಂಗ ಶಿವಾಚಾರ್ಯರು, ಗುಡದೂರಿನ ದೊಡ್ಡಬಸವಾರ್ಯರು, ಅಂಕಲಿಮಠದ ವೀರಭದ್ರ ಸ್ವಾಮೀಜಿಗಳು ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಪವನ ಸಾನಿಧ್ಯ ಕರುಣಿಸಲಿದ್ದಾರೆ ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಜಾತ್ರೆಗೆ ಕೈಗೊಳ್ಳಬೇಕಾದ ಅನೇಕ ವಿಚಾರಗಳ ಕುರಿತು ಚರ್ಚಿಸಲಾಯಿತು. ಪ್ರವಚನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು
ಶಿವಾನಂದ ಸುಂಕದ, ಮಲ್ಲಪ್ಪ ಮಾಟೂರು, ವೀರಭದ್ರಪ್ಪ ಮೂಲಿಮನಿ, ಅಮರೇಶಪ್ಪ ತಲೇಖಾನ್, ಶರಣಪ್ಪ ಚಿತ್ರನಾಳ, ಶರಣಪ್ಪ ಸಜ್ಜನ್, ಈರಣ್ಣ ಗುಡೂರು, ಶರಣಪ್ಪ ಕುಂಬಾರ, ವಿರೇಶ ಖೇಣೇದ್, ವಿರುಪಾಕ್ಷಪ್ಪ ಸಜ್ಜನ್, ಗುರುಶಾಂತಯ್ಯ ಮೈಸೂರಮಠ, ಬಸವರಾಜ ಬಳಿಗಾರ , ಜಯಚಂದ್ರಕಾಂತ , ವಿನೋದ್ ಕನ್ನಾಪೂರಹಟ್ಟಿ, ಶಿವು ಕುಂಬಾರ, ಗಂಗಣ್ಣ ಮಡಿವಾಳ, ಅಮರೇಶ ಹೊನ್ನಳ್ಳಿ, ಚೆನ್ನಪ್ಪ ಕುಂಬಾರ ಹಾಗೂ ಇತರರಿದ್ದರು.