ಸುದ್ದಿಮೂವಾರ್ತೆ
ಗಂಗಾವತಿ,ಏ.೧೧- ತಾಲೂಕಿನ ವೆಂಕಟಗಿರಿ ಗ್ರಾ.ಪಂ. ವ್ಯಾಪ್ತಿಯ ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ರೋಜಗಾರ್ ದಿವಸ್ ಆಚರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು.
ತಾ.ಪಂ. ಸ್ವೀಪ್ ಸಂಕಲನ ವಿಷಯ ನಿರ್ವಾಹಕ ಜುಬೇರ್ ನಾಯ್ಕ್ ಮಾತನಾಡಿ, ಮತದಾನ ದಿನದಂದು ಯಾವುದೇ ಕಾರಣ ಹೇಳಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಶೇ.೧೦೦ ರಷ್ಟು ಮತದಾನ ಆಗಬೇಕು. ನಮ್ಮ ಮತ ಮಾರಿಕೊಳ್ಳಬಾರದು, ಯಾವುದೇ ಆಮೀಷಕ್ಕೆ ಒಳಗಾಗದೇ ಮತದಾನ ಮಾಡಬೇಕು ಕೂಲಿಕಾರರಿಗೆ ಜಾಗೃತಿ ಮೂಡಿಸಿದರು.
ನಂತರ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಮಾತನಾಡಿ, ನರೇಗಾದಡಿ ಒಂದು ಕುಟುಂಬಕ್ಕೆ ವರ್ಷಕ್ಕೆ ೧೦೦ ದಿನ ದುಡಿಯಲು ಅವಕಾಶ ಇದೆ. ನರೇಗಾ ಕೂಲಿ ಮೊತ್ತವನ್ನು ೩೧೬ ರೂ. ಗೆ ಹೆಚ್ಚಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಇದೆ. ಕೂಲಿಕಾರರು ಯೋಜನೆ ಲಾಭ ಪಡೆದುಕೊಳ್ಳಬೇಕು. ನರೇಗಾದಡಿ ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಗ್ರಾ.ಪಂ.ಸಿಬ್ಬAದಿಗಳಾದ ದುರಗೇಶ, ಯಮನೂರಪ್ಪ, ಗ್ರಾಮ ಕಾಯಕ ಮಿತ್ರರಾದ ಲಲಿತಮ್ಮ ಹಾಗೂ ಕಾಯಕ ಬಂಧುಗಳು, ಕೂಲಿಕಾರರು ಇದ್ದರು.