ಸುದ್ದಿಮೂಲ ವಾರ್ತೆ
ಆನೇಕಲ್, ಏ.12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೋವಿ ಸಮುದಾಯದ ಮುಖಂಡರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಲಾ ಹತ್ತು ಟಿಕೆಟ್ ನೀಡುವಂತೆ ಭೋವಿ ಒಕ್ಕೂಟ ಆಗ್ರಹಿಸಿದೆ.
ತಲತಲಾಂತರದಿಂದ ಕಲ್ಲು ಮಣ್ಣು ಕೆಲಸದಲ್ಲಿ ಅನುಭವಿಸಿದ ಭೋವಿ ಸಮುದಾಯಕ್ಕೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಮೂರು ಪಕ್ಷಗಳು ವಂಚಿಸಿವೆ. ಈ ಚುನಾವಣೆಯಲ್ಲೂ ಸಹ ಅದು ಮುಂದುವರಿಯಬಾರದು ಎಂದು ಭೋವಿ ಸಂಘದ ರಾಜ್ಯ ಅಧ್ಯಕ್ಷ ಗೌತಮ್ ಬೆಂಕಿ ಬನ್ನೇರುಘಟ್ಟದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಇಡೀ ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ಭೋವಿ ಸಮುದಾಯ ಬೆಂಗಳೂರು ಭಾಗದ 28 ಕ್ಷೇತ್ರಗಳಲ್ಲಿ ತಲಾ 25,000 ಜನಸಂಖ್ಯೆ ಹೊಂದಿದೆ. ಹೀರುವಾಗ ಭೂಮಿ ಸಮುದಾಯವನ್ನು ಮೂರು ಪಕ್ಷಗಳು ಕಡೆಗಣಿಸಿವೆ ಎಂದು ದೂರಿದರು.
ಸಮುದಾಯಕ್ಕೆ ಪ್ರತಿಶತ ಹತ್ತರಷ್ಟು ಶಾಸಕ ಸ್ಥಾನದ ಟಿಕೆಟ್ ಮೀಸಲಿಡಬೇಕು. ರಾಜಕೀಯ ವೇದಿಕೆಯಲ್ಲಿ ಕೇವಲ ಬಾಯಿ ಮಾತಿನಲ್ಲಿ ಬೋವಿ ಸಮುದಾಯವನ್ನು ಹೊಗಳಿದರೆ ಸಾಲದು. ಜನಾಂಗದ ವಿದ್ಯಾವಂತ ಸಮುದಾಯ ಎಲ್ಲವನ್ನೂ ಗಮನಿಸುತ್ತಿದೆ ಎಂದರು.
ಅಂಬೇಡ್ಕರ್ ಪ್ರತಿಷ್ಠಾನ ರಾಜ್ಯಾಧ್ಯಕ್ಷ ಎಂ. ಮುನಿನಾರಾಯಣ್, ಭೋವಿ ಸಂಘರ್ಷ ಸಮಿತಿಯ ಗಂಗಾಧರ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಿ.ಕೆ. ಪಾಳ್ಯದ ಕರ್ನಾಟಕ ಭೋವಿ ಸಮುದಾಯ ಸಂಘದ ವಿ . ವಿಜಯ್. ಮಂಟಪ ಗ್ರಾಮದ ಮುನಿರಾಜು, ಬೋವಿ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಸಮಾರಂಭದಲ್ಲಿ ಭಾಗಿಯಾಗಿದ್ದರು.