ಹೊಸಕೋಟೆ, ಏ.12: ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕೆಂದು ಹೊಸಕೋಟೆ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ಕವಾಯತ್ತು ಮೂಲ ಜಾಗೃತಿ ಮೂಡಿಸಲಾಯಿತು.
ಪಂಜಿನ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರರ್ಶನಕ್ಕೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಮತ್ತು ಸಿಇಓ ವರ್ಣಿತ್ ನೇಗಿ ಚಾಲನೆ ನೀಡಿದರು. ಪಂಜುಗಳನ್ನು ಕೈಯಲ್ಲಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಲ್ಲಿಸಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಚಲಾಯಿಸುವಂತೆ ಅರಿವು ಮೂಡಿಸಿದರು.
ಕಲಾತಂಡಗಳ ಜಾತ ಹಾಗೂ ಕಿರು ನಾಟಕ ನಗರದ ತಹಸಿಲ್ದಾರ್ ಕಚೇರಿಯಿಂದ ಆರಂಭವಾದ ಪಂಜಿನ ಕವಾಯತು ಹಾಗೂ ಸಂಸ್ಕೃತಿಕ ಕಲಾತಂಡಗಳ ಮೂಲಕ ಮತದಾನದ ಜಾಗೃತಿ ಜಾತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೂ ಮಂಡಿ ವೃತ್ತದಲ್ಲಿ ಮಾನವ ರ್ಪಳಿ ನರ್ಮಿಸಿ ಮತದಾನದ ಮಹತ್ವದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಮೆರವಣಿಗೆ ವೇಳೆ ಸಿಬ್ಬಂದಿಗಳು ಧ್ವನಿರ್ಧಕದ ಮೂಲಕ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಸೂಚಿಸುತ್ತಿದ್ದರು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನರು ಬಿತ್ತಿ ಪತ್ರಗಳು ಹಾಗೂ ಪಂಜುಗಳನ್ನ ಕೈಯಲ್ಲಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದನ್ನು ಮತದಾರರು ಗಮನ ಸೆಳೆದರು.
ತಾಲೂಕಿನಲ್ಲಿ ಮೇ 10ರಂದು ನಡೆಯಲಿರುವ ಚುನಾವಣೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಮಾಡುವಂತೆ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಾನಾ ರೀತಿಯಲ್ಲಿ ಮತದಾನ ಜಾಗೃತಿ ಕರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ.
ಪಂಜಿನ ಕವಾಯತು ಮೂಲಕ ನಗರದ ಜನರಲ್ಲಿ ಜಾಗೃತಿ ಮೂಡಿಸುವಂತೆ ಜಾತ ಕರ್ಯಕ್ರಮ ಮತದಾನ ಮಹತ್ವದ ಸಾರುವ ಗೀತೆಗಳನ್ನು ಜನಪದ ಕಲಾವಿದ ತಂಡಗಳು ಜೊತೆಯಲ್ಲಿ ಜಿಂಗಲ್ಸ್ ಗಳನ್ನ ಪ್ರಸಾರ ಮಾಡುವ ಮೂಲಕ ಅರಿವು ಮೂಡಿಸಲಾಯಿತು.
ಚಂದ್ರಶೇಖರ್ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹೊಸಕೋಟೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ. ಕೆ. ನಾಗರಾಜ್, ಚುನಾವಣೆ ಅಧಿಕಾರಿ ಗಂಗಪ್ಪ, ಸಹಾಯಕ ಚುನಾವಣೆ ಅಧಿಕಾರಿ ಮಹೇಶ್ ಕುಮಾರ್, ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಚಂದ್ರಶೇಖರ್, ಸೇರಿದಂತೆ ವಿವಿಧ ಇಲಾಖೆ ಸಹಾಯಕ
ನಿರ್ದೇಶಕರು, ನಗರಸಭೆ ಆಯುಕ್ತರು ಸಿಬ್ಬಂದಿ ಸ್ವಸಹಾಯ ಗುಂಪು ಮಹಿಳೆಯರು ಪೊಲೀಸ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಮುಂತಾದವರು ಇದ್ದರು.