ಇಂದು ನಾಮಪತ್ರ ಸಲ್ಲಿಸುವುದು ಆರಂಭ
ಬೆಳಗ್ಗೆ 11 ರಿಂದ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬೇಕು: ಶಾಂತಗೌಡ ಗುಣಕಿ
ಜೇವರ್ಗಿ: ಜೇವರ್ಗಿ ತಾಲೂಕಿನ ಚುನಾವಣೆ ಅಧಿಕಾರಿಗಳಾದ ಶ್ರೀ ಶಾಂತಗೌಡ ಗುಣಕಿ ಮಾತನಾಡಿದರು.
13-4-2023 ಗುರುವಾರ 11 ಗಂಟೆಯಿಂದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಸಮಯ 3 ಗಂಟೆಯವರೆಗೆ ಅವಕಾಶವಿರುತ್ತದೆ ಎಂದು ಚುನಾವಣೆ ಅಧಿಕಾರಿ ಶಾಂತಗೌಡ ಗುಣುಕಿ ತಿಳಿಸಿದರು.
ಅಭ್ಯರ್ಥಿಗಳು ಚುನಾವಣೆ ನಾಮಪತ್ರ ಸಲ್ಲಿಸುವಾಗ ಮೂರು ವಾಹನಗಳು ಬಳಸಿಕೊಳ್ಳಬೇಕು. ಕಾರ್ಯಾಲಯದಿಂದ 300 ಮೀಟರ್ ಹೊರಗಡೆ ಸಾರ್ವಜನಿಕರು ಇರಬೇಕು. ಚುನಾವಣೆ ಕಾರ್ಯಾಲಯದ ಒಳಗಡೆ ಬರುವಾಗ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿ ಹಿಡಿದು ಐದು ಜನ ಒಳಗಡೆ ಬರಲ್ಲ ಅವಕಾಶವಿರುತ್ತದೆ. ಆದಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಗೆಜೆಟ್ ಅಧಿಸೂಚನೆ ಪ್ರಕಟಿಸಿದ್ದು ದಿನಾಂಕ 13-4-2023 ಗುರುವಾರರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ 20ರಂದು ಆಗಿರುತ್ತದೆ. ನಾಮಪತ್ರ ಪರಿಶೀಲನೆಯ ದಿನಾಂಕ 21 ನಾಮಪತ್ರ ಹಿಂತೆಗೆದುಕೊಳ್ಳುವ ದಿನಾಂಕ 24-4-2023 ಅಂತಿಮ ವಾಗಿರುತ್ತದೆ. 10.05.2023 ರಂದು ಮತದಾನ ಜರುಗಲಿದೆ. 13.05.2023 ರಂದು ಮತ ಎಣಿಕೆ ಪ್ರಾರಂಭವಾಗಲಿದ್ದು ಫಲಿತಾಂಶ 15.05.2023 ರಂದು ಹೂರಬೀಳಲಿದೆ ಎಂದು ಚುನಾವಣೆ ಅಧಿಕಾರಿ ಶಾಂತಗೌಡ ಗುಣಕಿ ತಿಳಿಸಿದರು.