ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.13:ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ರಂಗೇರಿದ್ದು. ರಾಜ್ಯದ್ಯಂತ ಚುನಾವಣೆ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಈ ವೇಳೆ ಬೆಂಗಳೂರಿನ ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಬಿಜೆಪಿ ಪಕ್ಷದ ಶಾಸಕ ರಘು ಬೆಂಬಲಿಗರಿಂದ ಹಲ್ಲೆ ಮಾಡಲಾಗಿದೆ. ಕೊವಿಡ್ ಸಮಯದಲ್ಲಿ ನಿಮ್ಮ ಪಕ್ಷದಿಂದ ಏನ್ ಮಾಡಿದ್ದೀರಿ. ನಮಗೆ ನಮ್ಮ ಶಾಸಕರೇ ಸಾಕು. ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಪ್ರಚಾರದ ವೇಳೆ ಬಂದು ಅಡ್ಡಿ ಪಡಿಸಿದ್ದು ಅಲ್ಲದೇ ಮೊಬೈಲ್ ಕಿತ್ತುಕೊಂಡು ಹಲ್ಲೆಯನ್ನ ಮಾಡಲಾಗಿದೆ.
ಈ ಸಂಬಂಧ ಆಮ್ ಆದ್ಮಿ ಪಕ್ಷದ ಸರ್ ಸಿವಿ ರಾಮನ್ ನಗರ ಅಭ್ಯರ್ಥಿ ಮೋಹನ್ ದಾಸರಿ ಪ್ರತಿಕ್ರಿಯಿಸಿದ್ದು, ಸಿವಿ ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ಚುನಾವಣೆ ಪ್ರಚಾರದ ವೇಳೆ ಮನೋಜ್ ಕುಮಾರ್ & ಶಶಿಕುಮಾರ್ ಎನ್ನುವ ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮೋಹನ್ ಮತ್ತು ನಾಗರಾಜ್ ಸಂಗಡಿಗರು ಬಿಜೆಪ್ ಪಕ್ಷಕ್ಕೆ ಸೇರಿದರಾಗಿದ್ದು. ಪ್ರಚಾರ ಆರಂಭಕ್ಕೂ ಮೊದಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಹಾಗೆ ನಮ್ಮ ಕಾರ್ಯಕರ್ತರು ವಿಡಿಯೋ ತೆಗೆಯಲು ಹೋದಾಗ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಬೈಯಪ್ಪನಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಿದ್ದಾರೆ.