ಸುದ್ದಿಮೂಲ ವಾರ್ತೆ,
ಸಿಂಧನೂರು ಏ ೧೩: ವಿಧಾನಸಭೆ ಚುನಾವಣೆ ಈ ಬಾರಿಯಾದರೂ ರಾಯಚೂರು ಜಿಲ್ಲೆಯ ಏಳು ಮತಕ್ಷೇತ್ರಗಳಲ್ಲಿ ಒಂದು ಮತ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ನಾಗವೇಣಿ ಅವರು ಕೆಪಿಸಿಸಿ ಗೆ ಮನವಿ ಮಾಡಿದರು.
ಪ್ರತಿ ದಿನಾಲು ಸಂಘಟಿತಕರಾಗಿ ಹಗಲಿರಳು ದೇವದುರ್ಗ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ದುಡಿಯುತ್ತಿರುವ ಶ್ರೀದೇವಿ ಆರ್ ನಾಯಕ ಅವರಿಗೆ ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು. ಪ್ರಕಟಣೆಯಲ್ಲಿ ಮನವಿ ಮಾಡಿದರು.
ಹಲವು ದಶಕಗಳಿಂದ ದೇವದುರ್ಗ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಾ ಬಂದ ಕೀರ್ತಿ ಇವರ ಮನೆತನದಾಗಿದೆ ಆದ್ದರಿಂದ 2023 ಈ ಚುನಾವಣೆಯಲ್ಲಿ ದೇವದುರ್ಗ ಮತ ಕ್ಷೇತ್ರಕ್ಕೆ ಶ್ರೀದೇವಿ ನಾಯಕ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂದು ಘೋಷಿಸಿ ಸ್ಪರ್ಧೆಗೆ ಇಳಿಸಬೇಕೆಂದು ಡಾ. ನಾಗವೇಣಿ ಎಸ್ ಪಾಟೀಲ್ ಪ್ರಕಟಣೆಯಲ್ಲಿ ಮನವಿ ಮಾಡಿದರು.