ಸಿಂಧನೂರು.ಏ.೧೩ –
ಉಪ ಚುನಾವಣೆಯಲ್ಲಿ ಸಮಯದಲ್ಲಿ ಜನರಿಗೆ ಹಣ ನೀಡಿದರೆ ಮಾರಿಕೊಳ್ಳುತ್ತಾರೆ ಎನ್ನುವ ಅರ್ಥದಲ್ಲಿ ‘ಕಾಳಾಕಿದರೇ ಕೋಳಿಗೆ ಏನು ಕಮ್ಮಿ’ ಎಂದು ಹೇಳುತ್ತಿದ್ದ ಪ್ರತಾಪಗೌಡರಿಗೆ ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಿದ್ದು, ಮತದಾರರು ಎಂದಿಗೂ ಕೋಳಿ ಅಗಲ್ಲ ಎನ್ನುವದನ್ನು ಸಾಬೀತು ಪಡಿಸಿದ್ದಾರೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಕುಟುಕಿದರು.
ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಹಾಗೂ ಊಮಲೂಟಿ, ಕಲಮಂಗಿ, ತಿಡಿಗೋಳ ಗ್ರಾಮದ ೩೦ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಅಧಿಕಾರದಿಂದ ಜನ ಬೇಸತ್ತಿದ್ದಾರೆ, ಅಧಿಕಾರ ಕೊಟ್ಟ ಜನರನ್ನೇ ತಿರಸ್ಕರಿಸಿ, ಹಣದ ಅಸೆಗೆ ಮಾರಾಟವಾಗಿ, ಕ್ಷೇತ್ರದ ಜನತೆಯ ಬಗ್ಗೆಯೇ ಕಾಳಾಕಿದರೆ ಮತ ಹಾಕುತ್ತಾರೆ ಎನ್ನುವ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ. ತಾವು ಶಾಸಕರಾಗಿ ಅಲ್ಪಾವಧಿಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಈ ಬಾರಿಯೂ ತಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ದೊಡ್ಡಪ್ಪ ಕಲ್ಗುಡಿ, ಸಿರಾಜ್ ಪಾಷಾ ದಳಪತಿ, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಶಂಕ್ರಗೌಡ ಪೊ.ಪಾಟೀಲ್, ಪಟ್ಟಣ ಪಂಚಾಯಿತಿ ಸದಸ್ಯ ಅರವಿಂದ ರಡ್ಡಿ, ಗೋವಿಂದರಾಜ ಕಲ್ಗುಡಿ, ಬಸವರಾಜಪ್ಪ ಕುರುಕುಂದಿ, ರಾಮಣ್ಣ ಗುನ್ನಾಳ, ಶರಣಪ್ಪ ನಾಯಕ, ಅಮರೇಗೌಡ ಗಚ್ಚಿನ ಮನಿ, ರವಿಗೌಡ ಕಲಮಂಗಿ, ಪಂಪನಗೌಡ, ಶರಣಯ್ಯಸ್ವಾಮಿ, ಶಂಬನಗೌಡ ಕೆಮರೆಡ್ಡಿ, ವೀರಭ ದರಗೌಡ ಚಟ್ಲರ್, ಶಿವರಡ್ಡೆಪ್ಪ ಗುಂಡಾ, ಬಸವರಾಜ ಕನಸಾವಿ, ಭೀಮಣ್ಣ ನಾಯಕ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಸ್ಕಿ ಗ್ರಾಮಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಮಲ್ಲನಗೌಡ ದೇವರಮನಿ, ಫಾರೂಖ್ ಸಾಬ್ ಖಾಜಿ, ಬಾಪುಗೌಡ ದೇವರಮನಿ, ಮೈಬುಬಸಾಬ್ ಮುದ್ದಾಪುರ್, ಹನುಮೇಶ್ ಬಾಗೋಡಿ, ಮಂಟೆಪ್ಪ ಎಲೆಕೂಡ್ಲಿಗಿ, ಮೌಲಪ್ಪಯ್ಯ ಗುತ್ತೇದಾರ, ಶಾಮೀದ್ ಸಾಬ್ ಜೌದ್ರಿ, ಸಿದ್ದನಗೌಡ ಮಾಟೂರ, ಮಲ್ಲನಗೌಡ ಗುಂಡಾ, ಶಾಮೀದ್ ಅಲಿ ಅರಬ್, ಹುಲುಗಪ್ಪ ಉಪ್ಪಲದೊಡ್ಡಿ, ಬಸವರಾಜ ತಿಡಿಗೋಳ, ಶರಣಬಸವ ಗಡೇದ್, ಆದಪ್ಪ ಚಟ್ಲ, ಅಂಬ್ರೇಶ್ ಕಾಸರಡ್ಡಿ, ರುದ್ರಗೌಡ ಬಜ್ಜೆಗೌಡ ತಿಡಿಗೋಳ ಭಾಗವಹಿಸಿದ್ದರು.