ಸುದ್ದಿಮೂಲ ವಾರ್ತೆ
ಆನೇಕಲ್, ಏ.14: ಬಡವರ ಬದುಕಿನಲ್ಲಿ ದಿವ್ಯ ಬೆಳಕಾಗಿ ಪ್ರಜ್ವಲಿಸಿದವರು ಡಾ. ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಹೇಳಿದರು
ಅವರು ಪಟ್ಟಣದ ಬಸ್ ನಿಲ್ದಾಣದ ಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಕುರಿತು ಮಾತನಾಡುತ್ತಾ ಭಾರತ ದೇಶದಲ್ಲಿ ಸಮಾನತೆಯ ಪರಿಕಲ್ಪನೆಯನ್ನು ಹುಟ್ಟು ಹಾಕಿ ಮಾನವರೆಲ್ಲರೂ ಒಂದೇ ಎಂದು ಘೋಷಣೆ ಮಾಡಿದ ಧೀಮಂತ ವ್ಯಕ್ತಿ ಅಂಬೇಡ್ಕರ್ ಅವರು ಎಂದು ತಿಳಿಸಿದರು
ಅಂಬೇಡ್ಕರ್ ಅವರು ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಮೊದಲಿಗರಾಗಿ ಬಹುದೊಡ್ಡ ವಿಶ್ವವಿದ್ಯಾನಿಲಯದಂತೆ ಹಗಲು-ರಾತ್ರಿ ದುಡಿದ ಮೇರು ನಾಯಕರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ ಗೌಡ ಮಾತನಾಡಿ ಅಂಬೇಡ್ಕರ್ ರವರು ಕೇವಲ ದಲಿತರಿಗೆ ಮಾತ್ರ ನಾಯಕರಲ್ಲ ಅಖಂಡ ಭಾರತದ ಸಮಸ್ತ ಜನರೆಲ್ಲರಿಗೂ ಅವರು ನಾಯಕರಾಗಿದ್ದಾರೆ ಅವರ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿರುವುದು ಅವರ ಶ್ರೇಷ್ಠತೆಗೆ ಹಿಳಿದ ಕನ್ನಡಿಯಾಗಿದೆ ಎಂದು ಹೇಳಿದರು
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಅರೇಹಳ್ಳಿ ಮಂಜು ಮಾತನಾಡಿ ಯಾವುದೇ ವಿಚಾರದಲ್ಲಿ ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಮಾತನಾಡದಂತಹ ತತ್ವ ಚಿಂತನೆಗಳನ್ನು ಭಾರತಕ್ಕೆ ನೀಡಿದ ತತ್ವಜ್ಞಾನಿ ಅಂಬೇಡ್ಕರ್ ಎಂದು ತಿಳಿಸಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ್ಯಾಧ್ಯಕ್ಷ ಅಪ್ಸರ ಆಲಿಖಾನ್ ಮಾತನಾಡಿ ದೇಶ ಅಭಿವೃದ್ಧಿಯ ಪಥದತ್ತ ಸಾಗಬೇಕಾದರೆ ಧರ್ಮ ಧರ್ಮಗಳು ಪರಸ್ಪರ ಗೌರವಿಸಿ ಶಾಂತಿಯ ನೆಲೆಗಟ್ಟಿನಲ್ಲಿ ಬದುಕಬೇಕು ಎಂದು ಸಲಹೆ ನೀಡಿದ ಶಾಂತಿದೂತ ಅಂಬೇಡ್ಕರ್ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಗೌರೇನಳ್ಳಿ ಮುನಿಕೃಷ್ಣ ಬಿದರಗೆರೆ ನಾಗರಾಜು ವಿಶ್ವನಾಥ್ ಮೇಡಹಳ್ಳಿ ವೆಂಕಟೇಶ್ ಪುರುಷೋತ್ತಮ್ ಹರೀಶ್ ತಬಲಾ ಮಂಜು ವಿಷ್ಣು ಸೇನಾ ಸಮಿತಿಯ ಫಯಾಜ್ ಮಂಜು ಮಹಿಳಾ ಘಟಕದ ಅಧ್ಯಕ್ಷರಾದ ಬೊಮ್ಮಸಂದ್ರ ರೇಣುಕಾ ಶಂಭು ಸುರೇಶ್ ಬಿ ಕೆ ವಿಜಯಕುಮಾರ್ ಭಾರತಿ ವಿನೋದ ಶೇಖರ್ ಆನಂದ್ ಕುಮಾರ್ ಸಂತೆ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘದ ವ್ಯಾಪಾರಿ ನಾರಾಯಣ ಕನ್ನಡ ನಾಗಪ್ಪ ಪುರಸಭೆ ಮಾಜಿ ಸದಸ್ಯರಾದ ಅನಸೂಯ ವೆಂಕಟರಾಜು ಮಾಜಿ ಉಪಾಧ್ಯಕ್ಷರಾದ ಬಿ ಪಿ ಮರಿಯಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಸಿ ಮುನಿರಾಜು ಹಿರಿಯ ಕವಿ ಸುಂದರ್ ಪ್ರಕಾಶ್ ಸಮಂದೂರ್ ಮರಿಯಪ್ಪಕಸಾಪ ಆದೂರು ಪ್ರಕಾಶ್ ಅಪ್ಸರ್ ಅಲಿಖಾನ್ ಚುಟುಕುಶಂಕರ್ ಮಿಲಿಟರಿ ಕುಮಾರ್ ಟಿ ಎಸ್ ಮುನಿರಾಜು ಭಾಗವಹಿಸಿದ್ದರು.