ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾದ ಬಳಿಕ ಜೆಡಿಎಸ್ ಅಳೆದು ತೂಗಿ 50 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ಗೆ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈತಪ್ಪಿದ್ದು, ಪಕ್ಷದ ಕಾರ್ಯಕರ್ತ ಪ್ರಕಾಶ್ ಸ್ವರೂಪ್ ಅವರಿಗೆ ಟಿಕೆಟ್ ಕೊಡುವಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯಾಶಸ್ವಿಯಾಗಿದ್ದಾರೆ. ಈ ಮೂಲಕ ಪ್ರತಿಷ್ಠೆಯ ವಿಷಯವಾಗಿದ್ದ ಹಾಸನ ಟಿಕೆಟ್ ವಿಷಯದಲ್ಲಿ ಕೊನೆಗೂ ಸ್ವರೂಪ್ ಮೆಲುಗೈ ಸಾಧಿಸಿದಂತಾಗಿದೆ.
ಜೆಡಿಎಸ್ ಕಚೇರಿಯಲ್ಲಿ ಮಧ್ಯಾಹ್ನದಿಂದ ಸಭೆ ನಡೆಸಿದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಒಟ್ಟಾಗಿ ಎರಡನೇ ಪಟ್ಟಿ ಬಿಡುಗಡೆ ಮಾಡಿದರು.
ಇನ್ನು ಇತ್ತೀಚೆಗೆ ಜೆಡಿಎಸ್ಗೆ ಮರಳಿದ ವೈಎಸ್ವಿ ದತ್ತಾ ಅವರಿಗೆ ಕಡೂರ್ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ ಚಿತ್ರದುರ್ಗದ ರಘು ಆಚಾರ್ ಅವರಿಗೆ ಈ ಪಟ್ಟಿಯಲ್ಲಿ ಟಿಕೆಟ್ ನೀಡಿಲ್ಲ. ಆದರೆ, ಇದೇ ಸಂದರ್ಭದಲ್ಲಿ ಜೆಡಿಎಸ್ ಸೇರಿದ ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರಿಬೋಳ ಮತ್ತು ಶಹಾಪೂರ ಮಾಜಿ ಶಾಸಕ ಗುರುಲಿಂಗಪ್ಪ ಗೌಡ ಅವರಿಗೆ ಟಿಕೆಟ್ ಖಚಿತಪಡಿಸಲಾಗಿದೆ.
ಇನ್ನು ಹಾಲಿ ಶಾಕಸರಾದ ಹೊಳೆನರಸೀಪುರದಿಂದ ಎಚ್.ಡಿ. ರೇವಣ್ಣ, ಬೇಲೂರಿನಿಂದ ಕೆ.ಎಸ್. ಲಿಂಗೇಶ್, ಸಕಲೇಶಪುರದಿಂದ ಎಚ್.ಕೆ. ಕುಮಾರಸ್ವಾಮಿ ಸಹಿತ ಹಲವರಿಗೆ ಟಿಕೆಟ್ ಪಕ್ಕಾ ಆಗಿದೆ.
ದೇವೇಗೌಡ, ಕುಮಾರಸ್ವಾಮಿ ಹೇಳಿದ್ದನ್ನು ಒಪ್ಪಿಕೊಳ್ಳುತ್ತೇವೆ
ಹಾಸನದಲ್ಲಿ ತಮ್ಮ ಪತ್ನಿ ಭವಾನಿ ಅವರಿಗೆ ಟಿಕೆಟ್ ಕೈತಪ್ಪಿರುವುದರ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ. ರೇವಣ್ಣ, ಕಳೆದ 2 ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ 50,000 ಮತಗಳ ಅಂತರದಿಂದ ಗೆಲ್ಲುವೆ ಅಂತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು. ಆದರೆ ಹಾಸನದ ಶಾಸಕರು, ಕಾರ್ಯಕರ್ತರ ಅಭಿಪ್ರಾಯದಂತೆ ಸ್ವರೂಪ್ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ನನಗೆ ರಾಜಕೀಯಕ್ಕಿಂತ ನಮ್ಮ ಮಾವನ ಆರೋಗ್ಯ ಮುಖ್ಯ ಎಂದು ಭವಾನಿ ಹೇಳಿದರು. ಶಾಸಕ ಸ್ಥಾನ ಮುಖ್ಯವಲ್ಲ ಎಂದು ಭವಾನಿ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇದ್ದರಿಂದ ಅಂತಿಮವಾಗಿ ಸ್ವರೂಪ್ಗೆ ಟಿಕೆಟ್ ನೀಡಲಾಗಿದೆ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ರೇವಣ್ಣ ಹೇಳಿದರು.
ಜೆಡಿಎಸ್ ಎರಡನೇ ಪಟ್ಟಿ ಹೀಗಿದೆ:
ಕುಡಚಿ-ಆನಂದ ಮಾಳಗಿ
ರಾಯಭಾಗ- ಪ್ರದೀಪ ಮಾಳಗಿ
ಸವದತ್ತಿ ಯಲ್ಲಮ್ಮ-ಸೌರಬ್ ಆನಂದ್ ಚೋಪ್ರಾ
ಅಥಣಿ-ಶಶಿಕಾಂತ್ ಪಡಸಲಗಿ ಗುರುಗಳು
ಹುಬ್ಬಳಿ- ಧಾರವಾಡ ಪೂರ್ವ- ವೀರಭದ್ರಪ್ಪ ಹಾಲರವಿ
ಕುಮಟಾ – ಸೂರಜ್ ಸೋನಿ ನಾಯಕ್
ಹಳಿಯಾಳ- ಎಸ್.ಎಲ್ ಘೊಟ್ನೆಕರ್
ಭಟ್ಕಳ- ನಾಗೇಂದ್ರ ನಾಯಕ್
ಶಿರಸಿ-ಸಿದ್ದಾಪುರ- ಉಪೇಂದ್ರ ಪೈ
ಯಲ್ಲಾಪುರ-ಡಾ.ನಾಗೇಶ್ ನಾಯಕ್
ಚಿತ್ತಾಪುರ- ಸುಭಾಷಚಂದ್ರ ರಾಠೋಡ
ಕಲ್ಬುರ್ಗಿ ಉತ್ತರ- ನಾಸೀರ್ ಹುಸೇನ್ ಉಸ್ತಾದ್
ಬಳ್ಳಾರಿ ನಗರ- ಅಲ್ಲಾಭಕ್ಷ ಅಲಿಯಾಸ್ ಮುನ್ನಾ
ಹಗರಿಬೊಮ್ಮನಹಳ್ಳಿ- ಪರಮೇಶ್ವರಪ್ಪ
ಹರಪನಹಳ್ಳಿ- ಎನ್.ಎಂ ನೂರ್ ಆಹ್ಮದ್
ಸಿರಗುಪ್ಪ- ಪರಮೇಶ್ವರ ನಾಯಕ
ಕಂಪ್ಲಿ- ರಾಜು ನಾಯಕ್
ಕೊಳ್ಳೇಗಾಲ- ಪುಟ್ಟಸ್ವಾಮಿ
ಗುಂಡ್ಲುಪೇಟೆ – ಕಡಬೂರು ಮಂಜುನಾಥ್
ಕಾಪು- ಸಬೀನಾ ಸಮದ್
ಕಾರ್ಕಳ- ಶ್ರೀಕಾಂತ್ ಕೊಚ್ಚೂರ್
ಉಡುಪಿ-ದಕ್ಷತ್ ಆರ್. ಶೆಟ್ಟಿ
ಬೈಂದೂರು- ಮನ್ಸೂರ್ ಇಬ್ರಾಹಿಂ
ಕುಂದಾಪುರ- ರಮೇಶ ಕುಂದಾಪುರ
ಮಂಗಳೂರು ದಕ್ಷಿಣ- ಸುಮತಿ ಹೆಗಡೆ
ಕನಕಪುರ- ನಾಗರಾಜ
ಯಲಹಂಕ-ಮುನೇಗೌಡ
ಸರ್ವಜ್ಞ ನಗರ -ಮೊಹ್ಮದ್ ಮುಸ್ತಾಫ್
ಯಶವಂತಪುರ-ಜವರಾಯಿಗೌಡ
ತಿಪಟೂರು-ಶಾಂತಕುಮಾರ್
ಶಿರಾ-ಆರ್.ಉಗ್ರೇಶ್
ಹಾನಗಲ್-ಮನೋಹರ ತಹಶೀಲ್ದಾರ್
ಸಿಂದಗಿ-ವಿಶಾಲಾಕ್ಷಿ ಶಿವಾನಂದ್
ಗಂಗಾವತಿ-ಹೆಚ್.ಆರ್.ಚನ್ನಕೇಶವ
ಹೆಚ್.ಡಿ ಕೋಟೆ- ಜಯಪ್ರಕಾಶ. ಸಿ
ಜೇವರ್ಗಿ-ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರಿಬೋಳ
ಶಹಾಪೂರ- ಗುರುಲಿಂಗಪ್ಪ ಗೌಡ
ಕಾರವಾರ- ಚೈತ್ರ ಕೋಟಕಾರ್
ಪುತ್ತೂರು- ದಿವ್ಯಾಪ್ರಭಾ
ಕಡೂರು-ವೈ.ಎಸ್.ವಿ ದತ್ತ
ಹೊಳೆನರಸೀಪುರ-ಹೆಚ್.ಡಿ ರೇವಣ್ಣ
ಬೇಲೂರು- ಕೆ.ಎಸ್ ಲಿಂಗೇಶ್
ಸಕಲೇಶಪುರ- ಹೆಚ್.ಕೆ ಕುಮಾರಸ್ವಾಮಿ
ಅರಕಲಗೂಡು- ಎ. ಮಂಜು
ಹಾಸನ-ಸ್ವರೂಪ ಪ್ರಕಾಶ
ಶ್ರವಣಬೆಳಗೂಳ-ಎನ್. ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್- ರಾಜಣ್ಣ
ಹಿರಿಯೂರು- ರವೀಂದ್ರಪ್ಪ
ಮಾಯಕೊಂಡ- ಆನಂದಪ್ಪ
ಸೊರಬ: ಚಂದ್ರೇಗೌಡ