ಸುದ್ದಿಮೂಲವಾರ್ತೆ ಮಾನ್ವಿ ಏ–1
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ಶರಣಬಸವ ನಾಯಕ ಜಾನೇಕಲ್ ಇವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರ ಭವನದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಹಮ್ಮಿಕೊಂಡ ವಾಲ್ಮೀಕಿ ಯುವ ಜಾಗೃತಿ ಸಮಾವೇಶದಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷರಾದ ಡಾ.ಟಿ.ಆರ್.ತುಳಸಿರಾಮ್ ಅವರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಯಚೂರು ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಶರಣಬಸವ ನಾಯಕ ಜಾನೇಕಲ್ ಅವರಿಗೆ ಅಧಿಕೃತವಾಗಿ ಆದೇಶ ಪತ್ರ ನೀಡಿ ಸಮಾಜದ ಸಂಘಟನೆಯನ್ನು ಬಲಪಡಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹರಿಹರ ವಾಲ್ಮೀಕಿ ಮಠದ ಸ್ವಾಮಿಜೀ ಪ್ರಸನ್ನಾನಂದ ಮಹಾಸ್ವಾಮಿಗಳು, ಸಂಜಯ ಕುಮಾರ ಸ್ವಾಮಿಗಳು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆಂಪರಾಮಯ್ಯ, ರಾಯಚೂರು ಜಿಲ್ಲೆಯ ಯುವ ಮುಖಂಡರಾದ ಹನುಮೇಶ ನಾಯಕ ಜೀನೂರು, ಉದಯಕುಮಾರ ರಾಜೊಳ್ಳಿ, ಹನುಮೇಶ ನಾಯಕ ನೀರಮಾನ್ವಿ, ತಾಯಪ್ಪ ನಾಯಕ ಶಿವಂಗಿ, ಬಸವರಾಜ ನಾಯಕ ಹೀರಾ, ಚನ್ನಬಸವ ನಾಯಕ ಹೀರಾ, ಅಭಿಷೇಕ ಹೀರಾ, ಲಕ್ಷ್ಮಣಗೌಡ, ಚಿನ್ನಿಗೌಡ ಸಿಂಧನೂರು, ಮೌನೇಶ ಕಣ್ಣೂರು, ಲವ ಗೋನವಾರ, ನರಸಪ್ಪ ಬನ್ನಿಗನೂರು, ಮಂಜುನಾಥ ನಾಯಕ ದದ್ದಲ, ಚನ್ನಬಸವ ನಾಯಕ ಯಾಪಲಪರ್ವಿ ಮುಂತಾದವರು ಉಪಸ್ಥಿತರಿದ್ದರು.