ಶ್ರೀನಿಧಿ. ಜೈನ್
ಬೆಂಗಳೂರು. ಏ.01: ಏಪ್ರಿಲ್ ಫಸ್ಟ್ ಮುರ್ಖರ ದಿನವೆಂದೇ ಹೇಳಲ್ಪಡುವ ದಿನ. ಏಪ್ರಿಲ್ ಫಸ್ಟ್ ಯಾರು ಯಾರಿಗೆ ಬೇಕಾದರೂ ಮುರ್ಖರನ್ನಾಗಿಸುವ ದಿನ.. ಇದು ನಮ್ಮ ಭಾರತದ ಆಚರಣೆಯಾಗಿರದೆ ಪಾಶ್ಚಿಮಾತ್ಯ ಸಂಸ್ಕೃತಿಯಾಗಿದೆ. ಪ್ರತಿ ವರ್ಷ ಏಪ್ರಿಲ್ ಫಸ್ಟ್ ಅನ್ನು ಏಪ್ರಿಲ್ ಫೂಲ್ಸ್ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಯಾರು ಏನೇ ಮರೆತರೂ ಈ ದಿನವನ್ನು ಮಾತ್ರ ಯಾರು ಮರೆಯಲಿಕ್ಕಿಲ್ಲ…
ಎಷ್ಟೋ ಜನರು, ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ, ಆಪ್ತರಿಗೆ ಏಪ್ರಿಲ್ ಫೂಲ್ ಮಾಡಲು ಮರೆಯದೇ ಕಾದು ಕುಳಿತಿರುತ್ತಾರೆ.
ಏಪ್ರಿಲ್ ಫಸ್ಟ್ ತಮಾಷೆಯ ದಿನವಾಗಿದ್ದು, ಮುರ್ಖರ ದಿನವೆಂದೇ ಕರೆಯಲಾಗುವಂತಹ ದಿನವಾಗಿದೆ. ತುಂಬಾ ಆತ್ಮೀಯರು ಬಂಧು, ಮಿತ್ರರನ್ನು ಬಕ್ರಾ ಮಾಡುವಲ್ಲಿ ಸಿಗುವ ಖುಷಿಯೇ ಬೇರೆ ಅಲ್ವಾ. ಫ್ರೇಡ್ಸ್, ಹುಷಾರು ಯಾಮಾರಿದರೆ ಬಕ್ರಾ ಆಗುವುದು ಗ್ಯಾರಂಟಿ.. ಬಕ್ರಾ ಆದ್ರೆ ವರ್ಷವಿಡೀ ಬಕ್ರ ಎಂದೇ ಗುರುತಿಸಿಕೊಳ್ಳುವಂತಾದೀತು..
ಸುಳ್ಳು ಹೇಳಿ ರಾಜರೋಷವಾಗಿ ತಿರುಗಾಡುವಂತಹ ದಿನ, ಎರಡು ವರ್ಷ ಮಾತ್ರ ಏಪ್ರಿಲ್ ಫಸ್ಟ್ ಆಚರಣೆ ಮಾಡೋಕು ಆಗದೆ ತುಂಬ ಬೇಸರವಾಗಿರಬೇಕು ಅಲ್ವಾ… ಹೌದು ಕೊರೊನಾ ಹಾವಳಿ ಹೆಚ್ಚಿದ್ದರಿಂದ, ಎಷ್ಟೋ ಜನ ಫ್ರೆಂಡ್ಸ್ನ ಭೇಟಿಯಾಗಲು ಸಾಧ್ಯವೇ ಆಗಿರಲಿಲ್ಲ.. ಬರೀ ನಮ್ಮ ಕಥೆನೇ ಹೇಳ್ತಾ ಹೋದ್ರೆ, ಏಪ್ರಿಲ್ ಫೂಲ್ ದಿನದ ಕಥೆ ಕೇಳೋರ್ ಯಾರು.. ಸ್ವಲ್ಪ ಏಪ್ರಿಲ್ ಫಸ್ಟ್ ಕಥೆನೂ ನೋಡೋಣ ಬನ್ನಿ…
ಏಪ್ರಿಲ್ ಫೂಲ್ ಆಚರಣೆ ಹುಟ್ಟಿದ್ದು ಫ್ರಾನ್ಸ್ನಲ್ಲಿ. ಜೂಲಿಯನ್ ಕ್ಯಾಲೆಂಡರ್ನಿಂದ ಗ್ರೆಗೋರಿಯನ್ ಕ್ಯಾಲೆಂಡರ್ಗೆ ಬದಲಾದ ಸನ್ನಿವೇಶದ ಉಲ್ಲೇಖ ಸಿಗುತ್ತದೆ. ಅಂದರೆ, ಈ ಅವಧಿಯಲ್ಲಿ ಪೋಪ್ ಗ್ರೆಗೊರಿ XIII ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯಿಸಿದ ನಂತರ ಈ ದಿನ ಆಚರಿಸಲು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಅಲ್ಲಿಯತನಕ ಹೊಸ ವರ್ಷವನ್ನು ಮಾರ್ಚ್ ಅಂತ್ಯದಲ್ಲಿ ಆಚರಿಸಲಾಗುತ್ತಿತ್ತು. ಆದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷದಾಚರಣೆ ಜನವರಿ 1ಕ್ಕೆ ಬದಲಾಗಿತ್ತು. ಈ ಬದಲಾವಣೆಯ ಬಳಿಕ ಏಪ್ರಿಲ್ ಮೊದಲ ದಿನವನ್ನು ಏಪ್ರಿಲ್ ಫೂಲ್ ಡೇ ಎಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ನಂಬಿಕೆ.
ಕೊನೆಗೂ ಬಂತು ನಿಮ್ಮ ದಿನ. ಹ್ಯಾಪಿ ಏಪ್ರಿಲ್ ಫೂಲ್ ಹುಷಾರಾಗಿ ಇವತ್ತಿನ ದಿನ ಆಚರಣೆ ಮಾಡಿ. ಜಾಣರಲ್ಲೇ ಜಾಣ ಆದವರು ಕೂಡ ಇವತ್ತಿನ ದಿನ ಮುರ್ಖರಾಗುವ ಲಕ್ಷಣಗಳೇ ಹೆಚ್ಚಿರುತ್ತೆ.. ಜಾಣ ಅಂತ ಬೀಗಬೇಡಿ, ಯಾಮರಿದರೆ ಆಗ್ತಿ ನೀನು ಬಕ್ರಾ ಹುಷಾರ್… ದೇಶ ಬೆಳದಿದೇ ಹಾಗೆಯೇ ತಾಂತ್ರಿಕತೆಯೂ ಬೆಳದಿದೆ. ಕೈಯಲ್ಲಿ ಇರುವ ಮೊಬೈಲ್, ಸಾಮಾಜಿಕ ಜಾಲತಾಣಗಳೇ ಹೆಚ್ಚು ಯಾಮರಿಸೋದು..
ಮಕ್ಕಳಿಂದ, ದೊಡ್ಡವರವರೆಗೂ ಸುಳ್ಳು ಹೇಳಿ ತಮಾಷೆ ಮಾಡುವ ದಿನ ತಮಾಷೆ ಮಾತ್ರ ಆಗಿರಲಿ… ನೋವನ್ನು ಉಂಟು ಮಾಡುವ ಸನ್ನಿವೇಶವಾಗದಿರಲಿ.. ಭಾವನೆಗಳಿಗೆ ಧಕ್ಕೆಯಾಗದಂತೆ, ಯಾರಿಗೂ ಕಿರಿಕಿರಿಯಾದಂತೆ ಇರಲಿ… ಹ್ಯಾಪಿ