ಜೇರಟಗಿ ಚೆಕ್ ಪೋಸ್ಟ್ ನಲ್ಲಿ 4.5 ಲಕ್ಷ ರೂಪಾಯಿ ವಶ : ಪಿಎಸ್ಐ ಅಮೋಜ
ಜೇವರ್ಗಿ: ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜೇರಟಗಿ ಚೆಕ್ ಪೋಸ್ಟ್ ನಲ್ಲಿ 4.50 ಲಕ್ಷ ರೂಪಾಯಿ ಹಣ ಹಾಗೂ ಬುಲೆರೋ ವಾಹನ ಸಮೇತ ರಾತ್ರಿ 8:30ಕ್ಕೆ ನೆಲೋಗಿ ಪೊಲೀಸ್ ಠಾಣೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ನೆಲೋಗಿ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಅಮೋಜ ಹಾಗೂ ಗುರುಬಸಪ್ಪ ಎ.ಎಸ್.ಐ ರವರು ಜೇರಟಗಿ ಚೆಕ್ ಪೋಸ್ಟಿಗೆ ಬಂದಿರುತ್ತಾರೆ. ನಾವೆಲ್ಲರೂ ಕೂಡಿಕೊಂಡು ವಾಹನಗಳನ್ನು ಚೆಕ್ ಮಾಡುತ್ತಾ ಇದ್ದಾಗ ಸಾಯಂಕಾಲ 6-15 ಗಂಟೆಯ ಸುಮಾರಿಗೆ ಸಿಂದಗಿ ಕಡೆಯಿಂದ ಒಂದು ಬುಲೋರೊ ವಾಹನ ಬಂದಿದ್ದು ಅದನ್ನು ನಿಲ್ಲಿಸಿ ವಾಹನದ ನಂಬರ ನೋಡಲಾಗಿ ಕೆಎ-32 ಪಿ-7248 ಅಂತಾ ಇದ್ದು ಸದರಿ ವಾಹನದಲ್ಲಿ ಚಾಲಕನೊಬ್ಬನೆ ಇದ್ದು ನಂತರ ನಾವು ವಾಹನವನ್ನು ತಪಸಾಣೆ ಮಾಡುತ್ತಿರುವಾಗ ಚಾಲಕನ ಹಿಂಬದಿಯ ಮದ್ಯದ ಸೀಟಿನಲ್ಲಿ ಒಂದು ಹಳದಿ ಬಣ್ಣದ ಪ್ಲಾಸ್ಟಿಕ ಚೀಲ ಸಿಕ್ಕಿದ್ದು ನಂತರ ನಾವು ಪ್ಲಾಸ್ಟಿಕ ಚೀಲದಲ್ಲಿ ಏನಿರುತ್ತದೆ ಅಂತಾ ಕೇಳಿದ್ದಕ್ಕೆ ಸದರಿಯವನು ಅದರಲ್ಲಿ 4.50.000/- ರೂಪಾಯಿ ಹಣ ಇರುತ್ತದೆ ಅಂತಾ ಹೇಳಿದನು. ನಂತರ ನಾನು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಹಿಬೂಬಸಾಬ ತಂದೆ ಮನ್ಸೂರಸಾಬ ಸೂರಪೂರ ವ|| 38 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ವಡಗೇರಿ ತಾ|| ಯಡ್ರಾಮಿ ಜಿ|| ಕಲಬುರಗಿ ಅಂತಾ ತಿಳಿಸಿದನು ನಂತರ ನಾನು ಸದರಿಯವನಿಗೆ ಹಣದ ದಾಖಲಾತಿಗಳನ್ನು ನೀಡುವಂತೆ ಕೇಳಿದಾಗ ಸದರಿಯವನು ನನ್ನ ಹತ್ತಿರ ಯಾವುದೆ ಅಧಿಕೃತ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದನು. ಈ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸುತ್ತಿದೆ ಎಂದು ಪಿಎಸ್ಐ ತಿಳಿಸಿದರು.
ಹಣ ಮತ್ತು ಬುಲೆರೋ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆದಿದೆ ಎಂದು ಪೊಲೀಸ್ ಠಾಣೆಯ ಪಿಎಸ್ಐ ಅಮೋಜ ತಿಳಿಸಿದರು.