ಸುದ್ದಿಮೂಲ ವಾರ್ತೆ ಏಪ್ರಿಲ್ 02,
ಮಸ್ಕಿ: ತಾಲೂಕಿನ ಹಾಲಾಪುರು ಗ್ರಾಮದ ಹತ್ತಿರ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯಿಂದ ಉಪನಾಲಿಗೆ ನೀರಿನ ಅರಿವನ್ನು ತಡೆಹಿಡಿಯಲಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ರೈತರು ಜೆ.ಇ ಅನ್ನಪೂರ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಾಲ ಮಾಡಿ ಬತ್ತ ನಾಟಿ ಮಾಡಲಾಗಿದೆ ನೀರು ಸಮರ್ಪಕವಾಗಿ ಸಿಗದಿದ್ದರೆ ಫಸಲು ಬರುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮೇಲಾಧಿಕಾರಿಗಳ ಆದೇಶದಂತೆ ನಾಲೆಯಲ್ಲಿ ಸ್ಥಿತಿಗತಗೊಳಿಸಲಾಗುತ್ತದೆ, ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಇಂಜಿನಿಯರ್ ಉಪನಾಲೆಯಲ್ಲಿ ನೀರಿನ ಅರಿವು ತಡೆದರು, ಶಾಸಕ ಬಸನಗೌಡ ತುರವಿಹಾಳ ಸ್ಥಳಕ್ಕೆ ಆಗಮಿಸಿ ನೀರು ತಡೆದರೆ ರೈತರಿಗೆ ನಷ್ಟವಾಗುತ್ತದೆ ಎಂದು ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ರಾಯಚೂರಿಗೆ ಕುಡಿಯುವ ನೀರು ಪೂರೈಸಲು ನಾಲೆಯ ಮೇಲೆ ನಿಷೇಧಾಗ್ನೆ ಹೇರಲಾಗಿದ್ದು, ಕೆರೆ ತುಂಬಿದ ನಂತರ ಉಪ ನಾಲಿಗೆ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರೈತರಿಗೆ ಶಾಸಕ ತಿಳಿಸಿದರು. ಈ ವೇಳೆ ಎರಿತಾತ ಜಂಗಮರ ಹಳ್ಳಿ, ಬಸವರಾಜ್ ಪೊ ಪಾ, ಗ್ಯಾನಪ್ಪ ದೊಡ್ಮನಿ, ವೆಂಕಟೇಶ್ ಸಾಹುಕಾರ, ರಾಮಣ್ಣ, ಸಿದ್ಧಾರ್ಥ ಪಾಟೀಲ್ ಮತ್ತು ಅನೇಕ ರೈತರು ಇದ್ದರು.