ಸುದ್ದಿಮೂಲ ವಾರ್ತೆ
ಕಲಬುರಗಿ, ಏ.2: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ರಾತ್ರಿ ವೇಳೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಡಾ. ಮಹೇಶ ಚಿಲ್ಕಾ ಹಾಗೂ ದೆಹಲಿಯ ವಿಶೇಷ ವಿಮಾನದ ಪೈಲೆಟ್ ಅನೂಪ್ ಕಚ್ರೂ ತಿಳಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ವಿಮಾನ ಸಂಚಾರಕ್ಕೆ ಈಗಾಗಲೇ ಪೂರ್ವಸಿದ್ದತೆ ಪೂರ್ಣ ಗೊಂಡಿದೆ. ದೆಹಲಿಯಿಂದ ವಿಶೇಷ ವಿಮಾನವನ್ನು ಹಾಗೂ ಸ್ಯಾಟಲೈಟ್ ಉಪಕರಣ ಹೊಂದಿರುವ ವಿಶೇಷ ವಿಮಾನವನ್ನು ತಂದು ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನ ಇಳಿಯಲು ಮತ್ತು ಹಾರಾಟ ನಡೆಸಲು ಬೇಕಾಗಿರುವ ಎಲ್ಲ ಸೌಕರ್ಯಗಳ ಪರೀಕ್ಷೆ ನಡೆದಿದೆ. ಈ ಕುರಿತ ವರದಿ ನಿರೀಕ್ಷಕರಿಗೆ ನೀಡಲಾಗಿದ್ದು ಇದನ್ನು ವಾರದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದರು. ಪ್ರಾದಿಕಾರದಿಂದ ಅನುಮೋದನೆ ಸಿಕ್ಕ ತಕ್ಷಣ ತಿಂಗಳಯೊಳಗಾಗಿ ರಾತ್ರಿ ಪಾಳಯದ ವಿಮಾನ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದರು.
ವಿಮಾನ ನಿಲ್ಲಾಣದಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಕ್ಕಾಗಿ ನಮಗೆ ವಿಶ್ವಾಸವಿದೆ ಇದೆ. ಎಲ್ಲಾ ರಿಸೆಸರ್ಸ್ ಅವಶ್ಯಕತೆಗಳನ್ನು ಪೂರೈಸಲಾಗಿದೆಯೆ ಎಂದು ಖಚಿತ ಪಡಿಸಿಕೊಳ್ಳಲಾಗುವುದು. ನಾವು ಈಗಾಗಲೇ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದೇವೆ ಮತ್ತು ಡಿಜಿಸಿಎ ಪುನರಾವರ್ತನೆ ಪ್ರಕಿಯೆ ಪ್ರಸ್ತುತ ನಡೆಯುತ್ತದೆ. ಅದೇ ರೀತಿಯಾಗಿ ಇನ್ನೂ ಹೆಚ್ಚಿನ ಮೂಲ ಮೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಎರಡು ವಿಶೇಷ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಐದು ವಿಮಾನಗಳ ಸಂಚಾರಕ್ಕೆ ಆಯಾ ವಿಮಾನ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವೈದ್ಯಕೀಯ ತುರ್ತು ಚಿಕಿತ್ಸೆಗೆ ಈ ರಾತ್ರಿ ವಿಮಾನ ಸಹಾಯಕಾರಿಯಾಗಲಿದೆ. ಮೊದಲ ಹಂತವಾಗಿ ಎರಡು ವಿಮಾನಗಳು ಎರಡು ವಿಮಾನ ಸಂಚಾರ ಮಾಡಲಾಗುತ್ತಿದ್ದು, ಕಲಬುರಗಿಯಿಂದ ಬೆಂಗಳೂರು, ಕಲಬುರಗಿಯಿಂದ ತಿರುಪತಿಯಿಂದ ಮತ್ತು ಕಲಬುರಗಿಯಿಂದ ಇಂಡನ್ ( ದೆಹಲಿ) ಈ ಮಾರ್ಗಗಳಲ್ಲಿ ಸಂಚಾರ ಆರಂಭವಾಗಲಿದೆ ಎಂದರು. ಪೈಲೇಟ್ ಗಳಾದ ಕ್ಯಾಪ್ಟನ್ ಶಕ್ತಿಸಿಂಗ್, ವಿಮಾನ ನಿರೀಕ್ಷಕರಾದ ದೇವೇಂದ್ರನಾಥ, ಆವಿನಾಶ ಯಾದವ, ಸಲಹಾ ಸಮಿತಿ ಸದಸ್ಯರಾದ ನರಸಿಂಹ ಮೆಂಡನ್ ಇದ್ದರು.