ಸುದ್ದಿಮೂಲ ವಾರ್ತೆ ,
ಮಸ್ಕಿ ಏ೦೫ :ತಾಲೂಕಿನಲ್ಲಿ ಶಾಂತಿಯುತ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಚುನಾವಣಾ ಅಧಿಕಾರಿ ದೇವಿಕಾ ಹೇಳಿದರು.
ಪಟ್ಟಣ ತಾಲೂಕು ಕಚೇರಿಯ ಸಭಾಂಗಣದಲ್ಲಿ ಚುನಾವಣಾ ಜಾಗೃತಿ ಮತ್ತು ನೀತಿ ಸಂಹಿತೆ ಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು. ಕಲ್ಯಾಣ ಮಂಟಪದ ಮಾಲೀಕರು ರಾಜಕೀಯ ಪಕ್ಷಗಳ ಸಭೆ ಸಮಾರಂಭ ಕನ್ನಡದಲ್ಲಿ ಮಾಹಿತಿ ನೀಡಬೇಕು ಮತ್ತು ಚುನಾವಣಾ ಆಯೋಗ ಪ್ರತಿಯೊಬ್ಬ ನಾಗರಿಕರ ಬ್ಯಾಂಕ್ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮತದಾರರಿಗೆ ವಾಟ್ಸಾಪ್, ಫೇಸ್ ಬುಕ್ ಮೂಲಕ ಪ್ರಚಾರ ನಡೆಸುವುದು ಕೂಡ ನೀತಿ ಸಮಿತಿಯ ಉಲ್ಲಂಘನೆಯಾಗುತ್ತದೆ. ಅಲ್ಲದೆ ಫೋನ್ ಪೇ ಗೂಗಲ… ಪೇ ಮೂಲಕ ಹಣ ಕಳುಹಿಸಿದರು ಕೂಡ ಹಣದ ಆಮಿಷ ಒಡ್ಡಿದರು ನೀತಿ ಸಮಿತಿಯ ಉಲ್ಲಂಘನೆಯಾಗುತ್ತದೆ. ಮದ್ಯದ ಆಮಿಷ, ಪೆಟ್ರೋಲ… ಉಚಿತವಾಗಿ ನೀಡುವುದು ಕೂಡ ನೀತಿ ಸಂಹಿತೆ ಉಲ್ಲಂಘನೆ ಕಾರಣ, ಚುನಾವಣಾ ಆಯೋಗವು ಪ್ರತಿ ಬಾರ್ಗಳ ದಾಸ್ತಾನು ಪರಿಶೀಲನೆ ನಡೆಸುತ್ತದೆ. ಒಂದು ವೇಳೆ ವೇಳೆಯಲ್ಲಿ ಅಧಿಕ ಮಾರಾಟ, ಪೆಟ್ರೋಲ… ಬಂಕ್ಗಳಲ್ಲಿ ಯಥೇಚ್ಛವಾಗಿ ಮಾರಾಟವಾದಲ್ಲಿ ಅಂತಹ ಬಾರ್ ಮತ್ತು ಪೆಟ್ರೋಲ… ಬಂಕ್ಗಳ ಪರವಾನಗಿಯನ್ನು ನಿಷೇಧಿಸಲಾಗುವುದು ಎಂದರು.
ಸಾರ್ವಜನಿಕರು ತಮ್ಮ ಖಾಸಗಿ ಕಾರ್ಯಕ್ರಮವನ್ನು ಕಲ್ಯಾಣ ಮಂಟಪಗಳಲ್ಲಿ ಬಳಸುವುದಕ್ಕೆ ಚುನಾವಣಾ ಆಯೋಗದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಸುವಿಧ ಆಪ್ ಮೂಲಕವೂ ಕೂಡ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಸಾರ್ವಜನಿಕರು ತಾಲೂಕಿನಲ್ಲಿ ನಿಷ್ಪಕ್ಷಪಾತ ನ್ಯಾಯಯುತ ಶಾಂತಿಯುತ ಚುನಾವಣೆ ನಡೆಸಲು ಕೈಜೋಡಿಸುವ ಮೂಲಕ ಚುನಾವಣಾ ಆಯೋಗದ ಜೊತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಮಸ್ಕಿ ಕ್ಷೇತ್ರದ ಚುನಾವಣಾ ಅಧಿಕಾರಿ ದೇವಿಕಾ ಅಧಿಕಾರಿಯು ತಹಸೀಲ್ದಾರ್ ಸುಧಾ ಅರಮನೆ, ಗ್ರೇಡ್ -2ತಹಸೀಲ್ದಾರ್ ಷಣ್ಮುಖಪ್ಪ, ಚುನಾವಣಾ ಸಿರಸ್ತದಾರ ವಿಜಯಕುಮಾರ ಸಜ್ಜನ್, ಕಂದಾಯ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಇದ್ದರು.