ಸುದ್ದಿಮೂಲ ವಾರ್ತೆ
ಸಂಡೂರು, ಏ. ೭: ತಾಲ್ಲೂಕಿನ ತೋಕನಹಳ್ಳಿ ತಾಂಡಾದ ವಾಲ್ಯನಾಯ್ಕ್ ತಂದೆ ಢಾಕನಾಯ್ಕ್ ಇವರ ಕಿರಾಣಿ ಅಂಗಡಿಯ ಮೇಲೆ ಅಬಕಾರಿ ನಿರೀಕ್ಷಕ ತುಕಾರಾಮ ನಾಯ್ಕ ಹಾಗೂ ಸಿಬ್ಬಂದಿಯೊಂದಿಗೆ ಮಾಹಿತಿ ಮೇರೆಗೆ ದಾಳಿ ಮಾಡಿದ ಸಮಯದಲ್ಲಿ, ಅಂಗಡಿಯ ಪಕ್ಕದ ಒಂದು ಕೊಣೆಯಲ್ಲಿ ೧೨ ಮದ್ಯದ ಪೆಟ್ಟಿಗೆಗಳು ಪತ್ತೆಯಾಗಿದ್ದು, ಒಟ್ಟು ೬೯.೧೨೦ ಲೀಟರ್ ಮದ್ಯ ಹಾಗೂ ೩೧.೬೮೦ ಲೀಟರ್ ಬೀರ್ ಸಂಗ್ರಹಣೆ ಮಾಡಿರುವುದನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ.