ಸುದ್ದಿಮೂಲವಾರ್ತೆ
ಗಂಗಾವತಿ,ಏ.೭- ಕೊಪ್ಪಳ ಜಿಲ್ಲೆಯ ರತಜಮಹೋತ್ಸವ ಮತ್ತು ಸ್ವಾತಂತ್ರದ ಅಮೃತಮಹೋತ್ಸವದ ನಿಮಿತ್ಯ ಸರಕಾರದ ಗ್ಯಾಸೆಟಿಯರ್ ಇಲಾಖೆ ಜಿಲ್ಲೆಯ ಪ್ರತಿ ತಾಲೂಕುವಾರು ಗ್ಯಾಸೆಟಿಯರ್ಗಳನ್ನು ಪ್ರಕಟಿಸಿದೆ.
ಈ ಹಿಂದೆ ಹೈದರಾಬಾದ್ ರಾಜ್ಯದಲ್ಲಿದ್ದಾಗ ೧೯೦೯ರಲ್ಲಿ ರಾಯಚೂರು ಜಿಲ್ಲಾ ಗ್ಯಾಸೆಟಿಯರ್ ಮೊದಲಬಾರಿಗೆ ಪ್ರಕಟಗೊಂಡಿತ್ತು. ಸ್ವಾತಂತ್ರ್ಯಾನAತರ ೧೯೭೦ರಲ್ಲಿ ಕರ್ನಾಟಕ ಸರಕಾರ ಅಭಿಶಂಕರ ರವರ ಸಂಪಾದಕತ್ವದಲ್ಲಿ ರಾಯಚೂರು ಜಿಲ್ಲಾ ಗ್ಯಾಸೆಟಿಯರ್ ಪ್ರಕಟವಾಯಿತು. ೧೯೯೭ರಲ್ಲಿ ಕೊಪ್ಪಳ ಜಿಲ್ಲೆ ರಚನೆಯಾದ ನಂತರ ಇದೀಗ ಮೊದಲಬಾರಿಗೆ ತಾಲೂಕಿನ ಗ್ಯಾಸೆಟಿಯರ್ ಗಳು ಕನ್ನಡದಲ್ಲಿ ಪ್ರಕಟಗೊಂಡಿವೆ.
ಡಾ. ಶರಣಬಸಪ್ಪ ಕೋಲ್ಕಾರ ಗಂಗಾವತಿ ತಾಲೂಕು ಗ್ಯಾಸೆಟಿಯರ್ನ್ನು, ಡಾ. ರವಿ ಚವ್ಹಾಣ ಕುಷ್ಟಗಿ ತಾಲೂಕು ಗ್ಯಾಸೆಟಿಯರ್ನ್ನು ಹಾಗೂ ಇಬ್ಬರೂ ಕೂಡಿ ಯಲಬುರ್ಗಾ ತಾಲೂಕು ಗ್ಯಾಸೆಟಿಯರ್ಗಳನ್ನು, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಕೊಪ್ಪಳ ತಾಲ್ಲೂಕು ಗ್ಯಾಸೆಟಿಯರ್ ರಚಿಸಿದ್ದಾರೆ.
ಈ ಗ್ಯಾಸೆಟಿಯರ್ಗಳಿಗೆ ಇಲಾಖೆಯ ಎ. ರಾಜಮ್ಮ ಚೌಡರೆಡ್ಡಿಯವರ ಮುಖ್ಯ ಸಂಪಾದಕರಾಗಿದ್ದಾರೆ. ಪ್ರತಿ ಗ್ಯಾಸೆಟಿಯರ್ ತಾಲೂಕಿನ ಪ್ರಾಸ್ತಾವಿಕ ಮಾಹಿತಿ, ಇತಿಹಾಸ, ಜನತೆ, ಕೃಷಿ ಮತ್ತು ನೀರಾವರಿ, ಕೈಗಾರಿಕೆ ಮತ್ತು ಪ್ರವೃತ್ತಿಗಳು, ಬ್ಯಾಂಕಿAಗ್-ಸಹಕಾರ-ವಾಣಿಜ್ಯ-ವ್ಯಾಪಾರ, ಸಾರಿಗೆ ಸಂಪರ್ಕ, ಆಡಳಿತ ವ್ಯವಸ್ಥೆ, ಶಿಕ್ಷಣ ಮತ್ತು ಕ್ರೀಡೆ, ಸಾಹಿತ್ಯ ಮತ್ತು ಸಂಸ್ಕೃತಿ, ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು ಎಂಬ ೧೨ ಅಧ್ಯಾಯಗಳಲ್ಲಿ ತಾಲೂಕಿನ ಅಪಾರ ಮಾಹಿತಿಯನ್ನು ಒಳಗೊಂಡಿದ್ದು, ಇವು ತಾಲೂಕಿನ ಸಮಗ್ರ ಮಾಹಿತಿ ಕೋಶಗಳಾಗಿವೆ.