ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೭: ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ಸಂಸದ ಸಂಗಣ್ಣ ಕರಡಿ ಟಿಕೆಟ್ ಗಾಗಿ ಪಂಚಮಸಾಲಿ ದಾಳ ಉರುಳಿಸುತ್ತಿದ್ದಾರೆ. ಜಿಲ್ಲೆಯ ಪಂಚಮಸಾಲಿ ಮುಖಂಡರೊಂದಿಗೆ ಕೂಡಲ ಸಂಗಮದ ಶ್ರೀಜಯಮೃತ್ಯುಂಜಯ ಸ್ವಾಮಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಒಬ್ಬರು ಪಂಚಮಸಾಲಿಗಳಿಗೆ ಟಿಕೆಟ್ ಗಾಗಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿಯಿಂದ ಈಗ ಕೊಪ್ಪಳ ವಿಧಾನಸಭೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಸಂಸದರಿಗೆ ಟಿಕೆಟ್ ಇಲ್ಲ ಎಂಬ ಬಿಜೆಪಿ ಹೈಕಮಾಂಡ ಸಂದೇಶದಿಂದ ಟೆನ್ಸನ್ ಗೆ ಒಳಗಾಗಿರುವ ಸಂಗಣ್ಣ ಕರಡಿ ಈ ತೀವ್ರ ಯತ್ನ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಜಿಲ್ಲೆಯ ಪಂಚಮಸಾಲಿ ಮುಖಂಡರಾದ ಮಾಜಿ ಶಾಸಕ ಕೆ ಶರಣಪ್ಪ. ಯಲಬುರ್ಗಾದ ಬಸಲಿಂಗಪ್ಪ ಭೂತೆ ಸೇರಿ ಹಲವು ಮುಖಂಡರೊಂದಿಗೆ ರಾಜ್ಯ ಮುಖಂಡರನ್ನು ಭೇಟಿ ಮಾಡಿಸಿದ್ದಾರೆ, ಈ ಮಧ್ಯೆ ಪಂಚಮಸಾಲಿ ಸಮಾಜದ ಕೂಡಲ ಸಂಗಮದ ಶ್ರೀಜಯಮೃತ್ಯಂಜಯ ಸ್ವಾಮೀಜಿ ಭೇಟಿ ಮಾಡಿ ಒತ್ತಡ ಹಾಕಿಸುವ ತಂತ್ರ ಹಾಕಿಸುತ್ತಿದ್ದಾರೆ.
ಈ ಮಧ್ಯೆ ಕೊಪ್ಪಳ, ಯಲಬುರ್ಗಾ ಹಾಗು ಕುಷ್ಟಗಿಯಲ್ಲಿ ಪಂಚಮಸಾಲಿ ಸಮಾಜದ ಮತದಾರರು ಗಣನೀಯವಾಗಿದ್ದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಂಚಮಸಾಲಿಗಳಿಗೆ ಒಬ್ಬರಿಗೆ ಟಿಕೆಟ್ ಕೊಡಬೇಕು. ಅದರಲ್ಲಿ ಕೊಪ್ಪಳದಿಂದ ಸಂಗಣ್ಣ ಕರಡಿಯವರಿಗೆ ನೀಡಬೇಕು. ಒಂದು ವೇಳೆ ಸಂಗಣ್ಣನವರಿಗೆ ಟಿಕೆಟ್ ಕೊಡದಿದ್ದರೆ ಕುಷ್ಟಗಿಯಿಂದ ಬಸವರಾಜ ಹಳ್ಳೂರಿಗೆ ನೀಡುವಂತೆ ಜಿಲ್ಲೆ ಪಂಚಮಸಾಲಿ ಮುಖಂಡರ ಒತ್ತಡ ಹಾಕಿದ್ದಾರೆ. ಇದೇ ಉದ್ದೇಶಕ್ಕಾಗಿ ಕಳೆದ ತಿಂಗಳ ಓಜನಳ್ಳಿಯಲ್ಲಿ ಸಂಗಣ್ಣ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದ್ದರು ಎಂಬ ಚರ್ಚೆಯೂ ಆರಂಭವಾಗಿದೆ.