ಸುದ್ದಿಮೂಲವಾರ್ತೆ
ಮುದಗಲ್ ಏ,08: ಸಮೀಪದ ಲೆಕ್ಕಿಹಾಳ ಗ್ರಾಮದ ಆರಾಧ್ಯದೇವ ಶ್ರೀ ಮೌನೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಸಂಭ್ರಮ, ಸಡಗರದಿಂದ ಪಲ್ಲಕ್ಕಿ ಉತ್ಸವ ಗುರುವಾರ ಜರುಗಿತು.
ಬೆಳಿಗ್ಗೆ ಮೌನೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನ ಗೋಪುರಕ್ಕೆ ಕಳಸರೋಹಣ ಮಾಡಿದರು. ನೂರಾರು ಭಕ್ತರು ಕಾಯಿ-ಕರ್ಪೂರ, ಮುಡಿಪು, ದಿಡ್ ನಮಸ್ಕಾರ ಸೇರಿದಂತೆ ಹಲವು ಹರಕೆ ತೀರಿಸಿದರು.
ಜಾತ್ರಾಮಹೋತ್ಸವದಲ್ಲಿ ೧೧ ಸಾಮೂಹಿಕ ವಿವಾಹಗಳು ಜರುಗಿದವು.ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡು ದೇವರು ದರ್ಶನ ಪಡೆದರು.
ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಜೆಡಿಎಸ್ ಮುಖಂಡ ಸಿದ್ದು ಬಂಡಿ, ಬಿಜೆಪಿ ತಾಲೂಕಾದ್ಯಕ್ಷ ವೀರನಗೌಡ ಪಾಟೀಲ್ ದೇವರ ದರ್ಶನ ಪಡೆದರು.
ನಂದವಾಡಗಿ-ಆಳಂದ ಮಹಾಂತೇಶ್ವರ ಮಠದ ಪೂಜ್ಯರಾದ ಅಭಿನವ ಚನ್ನಬಸವ ಶಿವಾಚಾರ್ಯ, ಸಂತೆಕೆಲ್ಲೂರು ಘನಮಠದ ಗುರುಬಸವ ಸ್ವಾಮೀಜಿ, ಸಜ್ಜಲಗುಡ್ಡದ ದೊಡ್ಡಬಸವಾರ್ಯರು, ಕೋಮನೂರು ನಾಗಭೂಷಣ, ಶರಣಯ್ಯ ಹಿರೇಮಠ, ಶಶಿಧರ ಹಿರೇಮಠ, ಹಾಗೂ ಅನೇಕ ಭಕ್ತರು ಇದ್ದರು.